Site icon ಉಡುಪಿ ನ್ಯೂಸ್ ಪ್ಲಸ್

ಟೀಂ ಇಂಡಿಯಾ ವಿರುದ್ಧ ನ್ಯೂಜಿಲೆಂಡ್ ಗೆ 21 ರನ್‌ಗಳ ಜಯ

ರಾಂಚಿ: ಟಿ20 ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಸೋಲನುಭವಿಸಿದ. ರಾಂಚಿಯಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಪ್ರವಾಸಿ ತಂಡ ನ್ಯೂಜಿಲೆಂಡ್ 21 ರನ್‌ಗಳ ಜಯ ದಾಖಲಿಸಿದೆ. ಟಾಸ್ ಗೆದ್ದ ಭಾರತ ನ್ಯೂಜಿಲೆಂಡ್‌ಗೆ ಮೊದಲು ಬ್ಯಾಟಿಂಗ್ ಅವಕಾಶ ಮಾಡಿಕೊಟ್ಟಿತು. ಡೆವೊನ್ ಕಾನ್ಯ (52), ಡೇರಿಲ್ ಮಿಚೆಲ್ (59) ಆಕರ್ಷಕ ಅರ್ಧ ಶತಕದ ನೆರವಿನೊಂದಿಗೆ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟದೊಂದಿಗೆ 176 ರನ್ ಸೇರಿಸಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ಉತ್ತಮ ಆರಂಭ ದೊರೆಯಲಿಲ್ಲ ಶುಭಮನ್ ಗಿಲ್ (7) ಇಶಾನ್ ಕಿಶನ್ (1) ರಾಹುಲ್ ತ್ರಿಪಾಠಿ (0) ಒಬ್ಬರ ಹಿಂದೆ ಒಬ್ಬರು ಔಟಾದರು. ಸೂರ್ಯಕುಮಾರ್ ಯಾದವ್ 47 ರನ್ ಗಳಿಸಿದರು. ಅಂತಿಮವಾಗಿ ಭಾರತ 9 ವಿಕೆಟ್ ನಷ್ಟದೊಂದಿಗೆ 155 ರನ್ ಗಳಿಸಿ ಸೋಲು ಕಂಡಿತು. ಮೂರು ಟಿ20 ಪಂದ್ಯಗಳ ಸರಣಿಯಲ್ಲಿ ನ್ಯೂಜಿಲೆಂಡ್ 1-0 ಅಂತರದ ಮುನ್ನಡೆ ಸಾಧಿಸಿದ 

Exit mobile version