Site icon ಉಡುಪಿ ನ್ಯೂಸ್ ಪ್ಲಸ್

ಬಿಜೆಪಿಯ ವೈಫಲ್ಯಗಳನ್ನು ಹೊತ್ತು ಸಾಗಿದ ಪ್ರಜಾ ಧ್ವನಿ ಯಾತ್ರೆ

ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯಗಳು, ಮಿತಿಮೀರಿದ ಭ್ರಷ್ಟಾಚಾರ, ಪೊಲೀಸ್ ನೇಮಕಾತಿಯಲ್ಲಿ ಲಂಚದ ಬೇಡಿಕೆ, ಭೂ ಕಬಳಿಕೆ ಹಗರಣ, ಕೋವಿಡ್-19 ಮಹಾಮಾರಿ ಸಂದರ್ಭದಲ್ಲಿ ವೈದ್ಯಕೀಯ ಸಲಕರಣೆಗಳಲ್ಲಿ ಅವ್ಯವಹಾರ, ಆಹಾರ ಕಿಟ್‌ನಲ್ಲಿ ಭ್ರಷ್ಟಾಚಾರ, ಮಕ್ಕಳಿಗೆ ಅಂಗನವಾಡಿಯಲ್ಲಿ ನೀಡುತ್ತಿರುವ ಮೊಟ್ಟೆಯಲ್ಲೂ ಹಗರಣ, ಇಂಧನ ಇಲಾಖೆಯಲ್ಲಿ ಭ್ರಷ್ಟಾಚಾರ, ಅಕ್ರಮವಾಗಿ ಶಾಸಕರನ್ನು ಖರೀದಿಸಿ ಜನಬೆಂಬಲವಿಲ್ಲದೆ ಸರ್ಕಾರ ರಚನೆ, ಕಾಂಟ್ಯಾಕ್ಟರ್‌ಗಳಿಂದ 40% ಲಂಚದ ಬೇಡಿಕೆ, ಸರ್ಕಾರದ ಬಹುತೇಕ ಎಲ್ಲಾ ಇಲಾಖೆಗಳಲ್ಲಿ ವಿಪರೀತ ಭ್ರಷ್ಟಾಚಾರ, ಇಂತಹ ಹತ್ತು ಹಲವು ವಿಷಯಗಳಿಂದ ಸಾರ್ವಜನಿಕರು ಸೋತು ಹೋಗಿದ್ದು ಬದಲಾವಣೆಯ ಗಾಳಿ ಬೀಸುತ್ತಿದ್ದು ಜನರು ಕಾಂಗ್ರೆಸ್ ಸರ್ಕಾರವನ್ನು ಬಯಸುತ್ತಿದ್ದಾರೆ. ರಾಜ್ಯಾದ್ಯಂತ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರದ ವೈಫಲ್ಯ, ಭ್ರಷ್ಟಾಚಾರ, ಹಗರಣ, ಜನವಿರೋಧಿ ನೀತಿಯನ್ನು ಖಂಡಿಸಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ನೇತೃತ್ವದಲ್ಲಿ “ಉಡುಪಿಯಲ್ಲಿ ಆಯೋಜನೆಯಾಗಿದ್ದ ಪ್ರಜಾಧ್ವನಿ ಯಾತ್ರೆಯಲ್ಲಿ ಮಾತನಾಡಿದ ಶಿವಕುಮಾರ್, ಕರಾವಳಿಯಲ್ಲಿ ಬಿಜೆಪಿಯು ಕೋಮು ವಿಷಬೀಜ ಬಿತ್ತುತ್ತಿದ್ದು, ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳನ್ನು ಕಳಿಸಲು ಪೋಷಕರು ಹೆದರುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ

Exit mobile version