ಪಡುಬಿದ್ರಿ: ಕಾಪು ತಾಲೂಕಿನ ಪಡುಬಿದ್ರಿಯಲ್ಲಿ ಮಾರ್ಚ್ 11ರ ವರೆಗೆ ನಡೆಯಲಿರುವ ದೈವಾರ್ಷಿಕ ಡಕ್ಕೆಬಲಿ ಸೇವೆ ನಡಾವಳಿಗೆ ಪಡುಬಿದ್ರಿಯ ಶ್ರೀ ಖಡೇಶ್ವರಿ ಬ್ರಹ್ಮಸ್ಥಾನದಲ್ಲಿ ಚಾಲನೆ ನೀಡಲಾಯಿತು. ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ದೇಗುಲದಿಂದ ಬೇಂದ್ರೆ ಶಿವಳ್ಳಿ ಬ್ರಾಹ್ಮಣ ಹತ್ತು ಸಮಸ್ತರಿಂದ ಡಕ್ಕೆಬಲಿಗಾಗಿ ಮಂಡಲ ಹಾಕುವ ಕಾರ್ಯಕ್ಕೆ ವೈಭವದ ಹೊರೆ ಕಾಣಿಕೆ ಶ್ರೀ ಸನ್ನಿಧಿಗೆ ಸಮರ್ಪಿಸಲಾಯಿತು.
