Site icon ಉಡುಪಿ ನ್ಯೂಸ್ ಪ್ಲಸ್

ದೇಶದಲ್ಲಿ ಗಗನಕ್ಕೇರಿದ ಮೊಟ್ಟೆ ಬೆಲೆ

ಮುಂಬೈ: ದೇಶದಲ್ಲಿ ಚಳಿ ಮುಂದುವರಿದಿರುವಂತೆಯೇ ಕೋಳಿ ಮೊಟ್ಟೆ ದರ ಗಗನಕ್ಕೇರಿದೆ. ಮುಂಬೈನಲ್ಲಿ 12 ಮೊಟ್ಟೆಗೆ 90 ರೂಪಾಯಿ ನೀಡಬೇಕಾಗಿದೆ. ಚಿಲ್ಲರೆ ಅಂಗಡಿಯಲ್ಲಿ ದರ ಇನ್ನೂ ಹೆಚ್ಚಾಗಿದೆ.ಚಳಿಯಿಂದಾಗಿ ಉತ್ಪಾದನೆ ಕುಸಿದಿದ್ದು, ಬೇಡಿಕೆ ಹೆಚ್ಚಾಗಿರುವುದೇ ಇದಕ್ಕೆ ಕಾರಣವಾಗಿದೆ. ಡಿಸೆಂಬರ್ ತಿಂಗಳಲ್ಲಿ ಕೇಕ್ ತಯಾರಿಸಲು ಮೊಟ್ಟೆಗಳನ್ನು ಹೆಚ್ಚಾಗಿ ಬಳಸಲಾಗುತ್ತಿದೆ. ಇದರಿಂದ ಮೊಟ್ಟೆ ದರ ಸಾಮಾನ್ಯವಾಗಿ ಹೆಚ್ಚಾಗುತ್ತಿದೆ. ಇದೀಗ ಜನವರಿ 15 ದಿನ ಕಳೆದರೂ ಮೊಟ್ಟೆ ದರದಲ್ಲಿ ಇಳಿಕೆ ಕಂಡು ಬಂದಿಲ್ಲ.ಮೊಟ್ಟೆ ದರ ಹೆಚ್ಚಳದಿಂದಾಗಿ ಆಮ್ಲೆಟ್ ರೇಟ್ ಕೂಡ ಹೆಚ್ಚಾಗಿದೆ. ಹೈದರಾಬಾದ್, ಬೆಂಗಳೂರು ಸೇರಿದಂತೆ ಬಹುತೇಕ ನಗರಗಳಲ್ಲಿ ಕಳೆದ 10 ದಿನಗಳಲ್ಲಿ ಮೊಟ್ಟೆ ದರ ಜಾಸ್ತಿಯಾಗಿದೆ.

Exit mobile version