Site icon ಉಡುಪಿ ನ್ಯೂಸ್ ಪ್ಲಸ್

ಯೂಟ್ಯೂಬ್ ವೀಕ್ಷಿಸಿ ನೇಣಿಗೆ ಶರಣಾದ ವಿದ್ಯಾರ್ಥಿನಿ

ಯೂಟ್ಯೂಬ್ ವೀಕ್ಷಿಸಿ ಆರನೇ ತರಗತಿ ವಿದ್ಯಾರ್ಥಿನಿಯೋರ್ವಳು ಮನೆಯ ಬಾತ್ ರೂಮ್ ನಲ್ಲಿ ನೇಣಿಗೆ ಶರಣಾದ ಘಟನೆ ಉಡುಪಿ ಬ್ರಹ್ಮಗಿರಿಯ ಪ್ಲಾಟ್‌ವೊಂದರಲ್ಲಿ ನಡೆದಿದೆ. ಉಡುಪಿ ಸಾಯಿರಾಧ ಡೆವಲಪರ್ಸ್ ನ ಉದ್ಯೋಗಿ ಪ್ರವೀಣ್ ಶೆಟ್ಟಿ ಎಂಬುವವರ ಮಗಳು ಮಂಗಳಾದೇವಿ (11) ಎಂಬಾಕೆ ತನ್ನ ಬೆಡ್ ರೂಮ್ ನಲ್ಲಿ ಯೂಟ್ಯೂಬ್ ವೀಕ್ಷಿಸಿದ ಬಳಿಕ ಸ್ನಾನಗೃಹದಲ್ಲಿ ನೇಣಿಗೆ ಕೊರಳೊಡಿದ್ದಾಳೆ ಎನ್ನಲಾಗಿದೆ.ಬಾಲಕಿ ಕುಂಜಾರುಗಿರಿಯ ಆನಂದ ತೀರ್ಥ ಶಾಲೆಯ ಆರನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ನಿನ್ನೆ ಮಕರಸಂಕ್ರಾಂತಿಯ ಪ್ರಯುಕ್ತ ಶಾಲೆಗೆ ರಜೆ ಇದ್ದ ಕಾರಣ ಬಾಲಕಿಯನ್ನು ಮನೆಯಲ್ಲಿ ಬಿಟ್ಟು ಹೆತ್ತವರು ಕೆಲಸಕ್ಕೆ ಹೋಗಿದ್ದರು.ಸಂಜೆ ಮನೆಗೆ ಬಂದಾಗ ಬಾಲಕಿ ಬೆಡ್ ರೂಮ್ ನ ಬಾಗಿಲು ತೆರೆಯದಾಗ ಸಂಶಯಗೊಂಡು ಬಾಗಿಲು ಒಡೆದು ಒಳಹೋದಾಗ ಆಕೆ ನೇಣು ಬಿಗಿದ ಸ್ಥಿತಿಯಲ್ಲಿ ಇದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

Exit mobile version