ಪಡುಬಿದ್ರಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಂಚಿನಡ್ಕ ದಲ್ಲಿ ಈ ಭಾಗದ ದಶಕಗಳ ಬೇಡಿಕೆಯಾಗಿದ್ದ ನೂತನ ಅಂಬೇಡ್ಕರ್ ಭವನ ಕನಸನ್ನು ಮಾನ್ಯ ಶಾಸಕರು ಕೊಟ್ಟ ಮಾತಿನಂತೆ 55 ಸೆಂಟ್ಸ್ ಜಾಗ ಮಂಜೂರಾತಿಗೊಳಿಸಿ ತನ್ನ ವಿಶೇಷ ಮುತುವರ್ಜಿಯಿಂದ 20 ಲಕ್ಷ ರೂ ಅನುದಾನ ಒದಗಿಸಿ ನೂತನವಾಗಿ ನಿರ್ಮಿಸಲು ಉದ್ದೇಶಿಸಿರುವ ಅಂಬೇಡ್ಕರ್ ಭವನವನ್ನು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಶಿಲಾನ್ಯಾಸ ನೆರವೇರಿಸಿ ಮಾತನಾಡಿ ಅಂಬೇಡ್ಕರ್ ಸಮುದಾಯ ಭವನ ಸ್ಥಳೀಯ ಜನರಿಗೆ ಬಹುಪಯೋಗಿ ಆಗಲಿ ಎಂಬ ಉದ್ದೇಶದಿಂದ ಸೂಕ್ತ ರೀತಿಯ ಅನುದಾನ ಒದಗಿಸಿದ್ದು.. ಇದರ ಸಂಪರ್ಕ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ. ಶೀಘ್ರದಲ್ಲಿ ಇನ್ನೂ ಹೆಚ್ಚಿನ ರೀತಿಯಲ್ಲಿ ಈ ಭಾಗದ ಮೂಲಸೌಕರ್ಯ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದರು ಈ ಸಂದರ್ಭದಲ್ಲಿ ಪಡುಬಿದ್ರಿ ಪಂಚಾಯತ್ ಅಧ್ಯಕ್ಷರು ರವಿ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರು ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ರಮೇಶ್, ನಿರ್ಮಿತಿ ಕೇಂದ್ರ ಸಹಾಯಕ ಇಂಜಿನಿಯರ್ ಮುಕೇಶ್, ಪಡುಬಿದ್ರಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪುರಷೋತ್ತಮ, ಸ್ಥಳೀಯ ಮುಖಂಡರಾದ ಲೋಕೇಶ್ ಕಂಚಿನಡ್ಕ, ಕೃಷ್ಣ ಬಂಗೇರ, ಸಂತೋಷ್ ನಂಬಿಯರ್, ಸುಬ್ಬ, ಮಮತಾಜ್, ರಮೇಶ್ ಕಂಚಿನಡ್ಕ, ಕಿಟ್ಟು ಮೇಸ್ತ್ರಿ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು
