Site icon ಉಡುಪಿ ನ್ಯೂಸ್ ಪ್ಲಸ್

ಬೃಹತ್ ಆರೋಗ್ಯ ತಪಾಸಣಾ ಮೇಳ : ಶಾಸಕ ಲಾಲಾಜಿ ಆರ್. ಮೆಂಡನ್‌ ಉದ್ಘಾಟನೆ

ಜಮೈತುಲ್ ಫಲಾ: (ರಿ) ಕಾಪು ಘಟಕ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯ ಶಾಖೆ, ಭಾರತೀಯ ರೆಡ್ ಕ್ರಾಸ್‌ ಸಂಸ್ಥೆ ಉಡುಪಿ ಜಿಲ್ಲಾ ಶಾಖೆ ಇವರ ಜಂಟಿ ಆಶ್ರಯದಲ್ಲಿಯೆನೆಪೋಯ ಮೆಡಿಕಲ್ ಕಾಲೇಜ್ ದೇರಳಕಟ್ಟೆ ಮಂಗಳೂರು ಇವರ ಸಹಯೋಗದೊಂದಿಗೆ ಕಾಪು ಮಲ್ಲಾರ್ ಪಕೀರ್ನಕಟ್ಟೆ, ಉರ್ದು ಶಾಲೆಯ ಹತ್ತಿರ ಆಯುಶ್ ಕ್ಲಿನಿಕ್‌ನಲ್ಲಿ ಬೃಹತ್ ಆರೋಗ್ಯ ತಪಾಸಣಾ ಮೇಳ ಮತ್ತು ಉಚಿತ ಮಹಿಳಾ ಸ್ವಾಸ್ಥ್ಯ ಸಂರಕ್ಷಣಾ ತಪಾಸಣೆಯನ್ನು ಕಾಪು ವಿಧಾನ ಸಭಾ ಕ್ಷೇತ್ರದ ಶಾಸಕ ಲಾಲಾಜಿ ಆರ್. ಮೆಂಡನ್‌ರವರು ಉದ್ಘಾಟಿಸಿ, ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಪ್ರಪಂಚದಲ್ಲಿಯೇ ಅತೀ ದೊಡ್ಡ ಸೇವಾ ಸಂಸ್ಥೆಯಾಗಿದ್ದು, ಅಶಕ್ತರು, ಅಂಗವಿಕಲರು, ವಿಕಲಚೇತನರಿಗೆ ನಿರಂತರ ಸೇವೆ ನೀಡುವ ಮೂಲಕ ಉಡುಪಿ ಜಿಲ್ಲೆಯಾದ್ಯಂತ ಅತ್ಯುತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿರುವ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿ, ಸಂಸ್ಥೆಗೆ ಶುಭ ಹಾರೈಸಿದರು. ಅಲ್ಲದೆ ಖಾಸಗಿ ಸಂಸ್ಥೆಯ ಸಹಕಾರದಲ್ಲಿ ನಿರ್ಮಿಸಿರುವ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯವನ್ನು ಉನ್ನತೀಕರಿಸಲು ಪ್ರಯತ್ನಿಸುವ ಬಗ್ಗೆ ಭರವಸೆ ನೀಡಿದರು.ಮುಖ್ಯ ಅತಿಥಿಗಳಾಗಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಜಮೈತುಲ್ ಫಲಾ (ರಿ) ಇದರ ಅಧ್ಯಕ್ಷ ಶಭೀ ಅಹಮ್ಮದ್ ಖಾಜಿ, ಗೌರವ ಅತಿಥಿಗಳಾಗಿ ಯೆನಪೋಯ ಮೆಡಿಕಲ್ ಕಾಲೇಜು ದೇರಳಕಟ್ಟೆ ಮಂಗಳೂರು ಇದರ ಉಪಕುಲಪತಿ ಡಾ. ಎಮ್. ವಿಜಯ ಕುಮಾರ್, ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಕರ್ನಾಟಕ ರಾಜ್ಯಶಾಖೆಯ ಆಡಳಿತ ಮಂಡಳಿ ಸದಸ್ಯರಾದ ಲಯನ್ ಪಿಎಮ್‌ಜೆಎಫ್ ವಿ.ಜಿ.ಶೆಟ್ಟಿ, ಹಾಗೂ ರಾಜ್ಯ ಶಾಖೆಯ ಗೌರವ ಖಜಾಂಚಿ ಯತೀಶ್ ಬೈಕಂಪಾಡಿ, ಕಾಪು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸುಧಾಮ ಶೆಟ್ಟಿ, ಕಾಪು ಪುರಸಭೆ ಸದಸ್ಯ ನೂರುದ್ದೀನ್ ಭಾಗವಹಿಸಿದ್ದರು.

Exit mobile version