ನಗರದ ಬನ್ನಂಜೆ ಪರಿಸರದಲ್ಲಿ ಮನೆಯೊಂದರ ಎದುರು ನಿಲ್ಲಿಸಿದ ಬೈಕ್ ಕಳವಾಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸ್ಥಳೀಯ ನಿವಾಸಿ ಕೆ.ಜಯಪ್ರಕಾಶ್ ಎಂಬುವವರು ತಮ್ಮದ್ವಿಚಕ್ರ ವಾಹನವನ್ನು ಬನ್ನಂಜೆಯಲ್ಲಿರುವ ತಮ್ಮಮನೆಯ ಎದುರು ನಿಲ್ಲಿಸಿದ್ದರು.ನಿಲ್ಲಿಸಿದ ಜಾಗದಲ್ಲಿ ದ್ವಿಚಕ್ರ ವಾಹನ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ವಾಹನವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಕೆ.ಜಯಪ್ರಕಾಶ್ ಅವರು ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
