Site icon ಉಡುಪಿ ನ್ಯೂಸ್ ಪ್ಲಸ್

ಅಕ್ರಮ ಕಸಾಯಿಖಾನೆಗೆ ದಾಳಿ – ಇಬ್ಬರು ಪರಾರಿ..!

ಕಾಪು ತಾಲೂಕಿನ ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿನ ಅಕ್ರಮ ಕಸಾಯಿಖಾನೆಗೆ ಪೊಲೀಸರು ದಾಳಿ ಮಾಡಿದ್ದಾರೆ.ಮಲ್ಲಾರು ಗ್ರಾಮದ ಬಡಗರ ಗುತ್ತು ಎಂಬಲ್ಲಿಗೆ ಖಚಿತ ಮಾಹಿತಿ ಪಡೆದ ಪೊಲೀಸರು  ತಲುಪಿ ಅಲ್ಲಿನ ಫ್ಯಾಕ್ಟರಿಯ ಸಮೀಪ ಮರೆಯಲ್ಲಿ ನಿಂತು ನೋಡಿದಾಗ ಫ್ಯಾಕ್ಟರಿಯ ಹಿಂಭಾಗದ ಹಾಡಿಯಲ್ಲಿ ಇಬ್ಬರು ವ್ಯಕ್ತಿಗಳು ಸೇರಿಕೊಂಡು ದನದ ಮಾಂಸವನ್ನು  ಕಟಾವು ಮಾಡುತ್ತಿರುವುದು ಕಂಡುಬಂದಿದೆ. ಪೊಲೀಸರು ಕೂಡಲೇ ಸ್ಥಳಕ್ಕೆ ದಾಳಿ ಮಾಡಿದ್ದು, ಈ ವೇಳೆ ಕಾಪುವಿನ ಭಾರತ್ ನಗರದ ನಿವಾಸಿ ಮೊಹಮ್ಮದ್ ಆರೀಫ್ ಹಾಗೂ ಇನ್ನೋರ್ವ ಪರಾರಿಯಾಗಿದ್ದಾರೆ. ಸ್ಥಳದಲ್ಲಿ ಇದ್ದ ಸುಮಾರು  ಕೆಜಿಯಷ್ಟು ದನದ ಮಾಂಸ, ಕೃತ್ಯಕ್ಕೆ ಬಳಸಿದ ಮಾರಕಾಯುಧ ಹಾಗೂ ಇತರ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version