Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ ಜಿಲ್ಲಾ ರಜತ ಮಹೋತ್ಸವ ಪ್ರಯುಕ್ತ ಜ. 20 ರಿಂದ 3 ದಿನ ಮಲ್ಪೆ ಬೀಚ್ ಉತ್ಸವ ಶಾಸಕ ರಘುಪತಿ ಭಟ್ ಸಭೆ

ಉಡುಪಿ ಜಿಲ್ಲೆ ರಚನೆಯಾಗಿ 25 ವರ್ಷ ಪೂರ್ಣಗೊಂಡಿರುವ ಪ್ರಯುಕ್ತ ಹಮ್ಮಿಕೊಂಡಿರುವ “ಉಡುಪಿ ಜಿಲ್ಲಾ ರಜತ ಮಹೋತ್ಸವ” ಸಮಾರಂಭದ ಅಂಗವಾಗಿ ಜನವರಿ 20, 21 ಮತ್ತು 22 ರಂದು ಮಲ್ಪೆ ಬೀಚ್ ನಲ್ಲಿ ಆಯೋಜಿಸಲಾದ “ಬೀಚ್ ಉತ್ಸವ”ದ ಪೂರ್ವ ತಯಾರಿ ಕುರಿತು ಇಂದು ದಿನಾಂಕ 03-01-2023 ರಂದು ಮಲ್ಪೆಯ 5 ಭಜನಾ ಮಂಡಳಿಗಳ ಪದಾಧಿಕಾರಿಗಳು ಹಾಗೂ ಸ್ಥಳೀಯರೊಂದಿಗೆ ಮಲ್ಪೆ ಜ್ಞಾನಜೋತಿ ಭಜನಾ ಮಂದಿರದ ಬಳಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಸಭೆ ನಡೆಸಿ ಚರ್ಚಿಸಿದರು. ಈ ಸಂದರ್ಭದಲ್ಲಿ ಜ್ಞಾನಜ್ಯೋತಿ ಭಜನಾ ಮಂದಿರ ಅಧ್ಯಕ್ಷರಾದ ಜ್ಞಾನೇಶ್ವರ ಕೋಟ್ಯಾನ್, ಶಿವ ಪಂಚಾಕ್ಷರಿ ಭಜನಾ ಮಂದಿರದ ಅಧ್ಯಕ್ಷರಾದ ವಿಕ್ರಮ್ ಶ್ರೀಯಾನ್, ಶ್ರೀರಾಮ ಬಾಲಕರ ಭಜನಾ ಮಂದಿರದ ಅಧ್ಯಕ್ಷರಾದ ಕರುಣಾಕರ್ ಸಾಲ್ಯಾನ್, ಹನುಮಾನ್ ವಿಠೋಭ ಭಜನಾ ಮಂದಿರದ ಅಧ್ಯಕ್ಷರಾದ ದಯಾನಂದ್, ಶ್ರೀ ಪಂಡರಿನಾಥ ಭಕ್ತಿ ಉದಯ ಮಂದಿರದ ಅಧ್ಯಕ್ಷರಾದ ಧನಂಜಯ್, ಹಿಂದೂ ಯುವ ಸೇನೆ ಜಿಲ್ಲಾ ಘಟಕದ ಅಧ್ಯಕ್ಷರಾದ ಮಂಜು ಕೊಳ, ಪರಶುರಾಮ ಫ್ರೆಂಡ್ಸ್ ಅಧ್ಯಕ್ಷರಾದ ಶಾನ್ ರಾಜ್ ಕೋಟ್ಯಾನ್ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ರೋಷನ್ ಶೆಟ್ಟಿ, ನಿರ್ಮಿತಿ ಕೇಂದ್ರದ ಅರುಣ್ ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.

Exit mobile version