Site icon ಉಡುಪಿ ನ್ಯೂಸ್ ಪ್ಲಸ್

2016ರ ನೋಟು ರದ್ಧತಿ ಮಾನ್ಯವಾಗಿದೆ: ಸುಪ್ರೀಂ ಕೋರ್ಟ್ ಆದೇಶ

 

ನೋಟು ಅಮಾನ್ಯೀಕರಣವನ್ನು ತಳ್ಳಿಹಾಕಲು ಸಾಧ್ಯವಿಲ್ಲ, . ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ನೊಂದಿಗೆ ಸಮಾಲೋಚಿಸಿದ ನಂತರವೆ ಕೇಂದ್ರವು ಕ್ರಮ ಕೈಗೊಂಡಿದೆ ಮತ್ತು ಆರು ತಿಂಗಳ ಕಾಲ ಇಬ್ಬರ ನಡುವೆ ಸಮಾಲೋಚನೆ ನಡೆದಿದೆ ಎಂದು ಐವರು ಸದಸ್ಯರ ಪೀಠದ ನಾಲ್ವರು ನ್ಯಾಯಾಧೀಶರು ಹೇಳಿದ್ದಾರೆ. ಆದರೆ ನ್ಯಾಯಮೂರ್ತಿ ಬಿ.ವಿ.ನಾಗರತ್ನರವರು ಭಿನ್ನಮತದ ತೀರ್ಪು ನೀಡಿ, ‘ನೋಟು ರದ್ದತಿಯನ್ನು ಸಂಸತ್ತಿನ ಕಾಯಿದೆಯ ಮೂಲಕ ಕಾರ್ಯಗತಗೊಳಿಸಬಹುದಿತ್ತೆ ಹೊರತು ಸರ್ಕಾರದಿಂದ ಅಲ್ಲ, ಹಾಗಾಗಿ ಇದು ಕಾನೂನುಬಾಹಿರ’ ಎಂದು ಹೇಳಿದ್ದಾರೆ.

 

Exit mobile version