Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ: ಟೋಲ್‌ ಗೇಟ್‌ ವಿರೋಧಿ ಹೋರಾಟ ಸಮಿತಿ, ಸಮಾನ ಮನಸ್ಕ ಸಂಘಟನೆಗಳಿಂದ ಧರಣಿ

ಉಡುಪಿ: ಹೆಜಮಾಡಿ ಟೋಲ್ ಗೇಟ್’ನಲ್ಲಿ ಡಬಲ್ ಶುಲ್ಕ ಸಂಗ್ರಹ ಆದ್ಯಾದೇಶ ಹಿಂಪಡೆಯುವಂತೆ ಆಗ್ರಹಿಸಿ ಟೋಲ್ ಗೇಟ್ ವಿರೋಧಿ ಸಮಿತಿ ಮತ್ತು ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಉಡುಪಿಯಲ್ಲಿ ಧರಣಿ ನಡೆಯಿತು. ಸುರತ್ಕಲ್ ಟೋಲ್ ಗೇಟ್ ವಿರೋಧಿ ಸಮಿತಿ ಸಂಚಾಲಕರಾದ ಮುನೀರ್ ಕಾಟಿಪಳ್ಳ ಈ ಸಂದರ್ಭದಲ್ಲಿ ಮಾತನಾಡಿ, ಬಿಜೆಪಿ ಹೊರತು ಪಡಿಸಿ ಪಕ್ಷಾತೀತವಾಗಿ, ಧರ್ಮಾತೀತವಾಗಿ ನಡೆಯುತ್ತಿರುವ ಹೋರಾಟವಿದು. ಹೆಜಮಾಡಿ – ಟೋಲ್ ಗೇಟ್ ನಲ್ಲಿ ಸುರತ್ಕಲ್ ಟೋಲ್ ಗೇಟ್ ನ ದರ ವಿಲೀನಗೊಳಿಸಲಾಗಿದೆ. ಈಗ ತಾತ್ಕಾಲಿಕ ತಡೆ ನೀಡಲಾಗಿದೆ. ಆದರೆ ಈ ತಾತ್ಕಾಲಿಕ ತಡೆಯ ಬದಲು ನಮಗೆ ಶಾಶ್ವತವಾಗಿ ಈ ಆದೇಶವನ್ನು ತೆಗೆದು ಹಾಕಬೇಕೆಂದು ಆಗ್ರಹಿಸಿದರು. ತಾತ್ಕಲಿಕ ಸಂಗ್ರಹ ಕೇವಲ ಚುನಾವಣೆಯವರೆಗೆ ನಿಲ್ಲಿಸಿ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ. ಈ ಅಕ್ರಮದಲ್ಲಿ ಉಡುಪಿ ಜಿಲ್ಲೆಯ ಶಾಸಕರು ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಈ ಆತ್ಮಾದೇಶವನ್ನು ಹಿಂಪಡೆಯದಿದ್ದರೆ ಹೋರಾಟವನ್ನು ಮುಂದುವರಿಸಲಾಗುವುದು. ಮುಂದಿನ ದಿನಗಳಲ್ಲಿ ಜನರು ಈ ಟೋಲ್ ಗೇಟ್ ಜೊತೆಗೆ ಇಲ್ಲಿನ ಬಿಜೆಪಿ ಪ್ರತಿನಿಧಿಗಳನ್ನೂ ಮುಂದಿನ ಚುನಾವಣೆಯಲ್ಲಿ ಅರಬಿ ಸಮುದ್ರಕ್ಕೆ ಎಸಯಲಿದ್ದಾರೆಂದು ಹೇಳಿದರು. ಈ ಸಂದರ್ಭದಲ್ಲಿ ಬಾಲಕೃಷ್ಣ ಶೆಟ್ಟಿ,ರಮೇಶ್ ಕಾಂಚನ್, ಸುಂದರ್ ಮಾಸ್ತರ್,ಫಣಿರಾಜ್,ಅಝೀಝ್ ಉದ್ಯಾವರ, ಯಾಸೀನ್ ಮಲ್ಪೆ ಶಂಕರ್ ಕುಂದರ್,ಫಾ.ವಿಲಿಯಮ್ ಮಾರ್ಟಿಸ್ ವಾಮನ ಬಂಗೇರ, ಸಂತೋಷ್ ಕುಲಾಲ್, ರೋಶನಿ ವಲೆವರಾ,ನಾಗೇಶ್ ಉದ್ಯಾವರ ಕುಶಾಲ್ ಶೆಟ್ಟಿ  ಅನ್ಸರ್ ಅಲಿ ಕಾವು,ಕೇಶವ್ ಕೋಟ್ಯಾನ್ ಬಿಕೆ ಇಮ್ಮಿಯಾಝ್,ರಮೇಶ್ ಟಿಎಮ್,ಶ್ರೀನಾಥ್.ಬಿ.ಶೇಖರ್ ಕರುಣಾಕರ್.ರಮೇಶ್ ಸುವರ್ಣಕೆ ಶಂಕರ್.ಎಚ್ ನರಸಿಂಹ,ರೋನಾಲ್ಡ್ ಶ್ಯಾಮಲ ಭಂಡಾರಿ, ಪ್ರಖ್ಯಾತ್ ಶೆಟ್ಟಿ,ಯತೀಶ್ ಕರ್ಕೆರಾ ಇಕ್ಸಾಲ್ ಮನ್ನಾ,ಚಿಕ್ಕ ಮೊಗವೀರ ಹುಸೇನ್ ಕೋಡಿಬೆಂಗ್ರೆ, ಇದ್ರಿಸ್ ಹೂಡೆ ಉಪಸ್ಥಿತರಿದ್ದರು.

Exit mobile version