Site icon ಉಡುಪಿ ನ್ಯೂಸ್ ಪ್ಲಸ್

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ಉಚ್ಚಿಲ ಶಾಖೆ ನಬಾರ್ಡ್ ಸಹಯೋಗದೊಂದಿಗೆ ಗ್ರಾಹಕರಿಗೆ ಆರ್ಥಿಕ ಅರಿವು ಕಾರ್ಯಕ್ರಮ

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ ಉಚ್ಚಿಲ ಶಾಖೆ ಯಲ್ಲಿ ದಿನಾಂಕ 28.12.22 ರಂದು ನಬಾರ್ಡ್ ಸಹಯೋಗದೊಂದಿಗೆ ಗ್ರಾಹಕರಿಗೆ ಆರ್ಥಿಕ ಅರಿವು ಕಾರ್ಯಕ್ರಮ ಜರಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಖಾ ವ್ಯವಸ್ಥಾಪಕ ಮನೋಹರ್ ಹೆಜಮಾಡಿ ವಹಿಸಿದ್ದರು, ಕಾರ್ಯಕ್ರಮದ ಉದ್ಘಾಟನೆ ಯನ್ನು SCDCC ಬ್ಯಾಂಕ್ ಪಡುಬಿದ್ರಿ ಶಾಖೆಯ ಹಿರಿಯ ಶಾಖಾ ವ್ಯವಸ್ಥಾಪಕ ಹಾಗೂ ಹೆಜಮಾಡಿ ಯ ಸಾಮಾಜಿಕ , ಧಾರ್ಮಿಕ ಮುಂದಾಳು ಪ್ರಭೋದ್ ಚಂದ್ರ ಹೆಜಮಾಡಿಯವರು ನೆರವೇರಿಸಿ, ಜನರು ದುಡಿಮೆ ಯೊಂದಿಗೆ ಉಳಿತಾಯ ಮನೋಭಾವನೆ ಯನ್ನು‌ ಬೆಳೆಸಬೇಕೆಂದು ಕರೆಯಿತ್ತರು. ಮುಖ್ಯ ಅತಿಥಿ ಗಳಾಗಿ ನವೋದಯ ಸ್ವಸಹಾಯ ಸಂಘಗಳ ಮೇಲ್ವಿಚಾರಕ ಹರಿನಾಥ್, ಹಿರಿಯ ಪತ್ರಕರ್ತ ಬಾಲಕೃಷ್ಣ ಪೂಜಾರಿ ಉಚ್ಚಿಲ, ಇವರುಗಳು ಆಗಮಿಸಿದ್ದರು. ಶಾಖೆಯ ಸಿಬ್ಬಂದಿ ಶ್ರೀನಿಧಿ ರಾವ್ ಹಣಕಾಸಿನ ಉಳಿತಾಯ ಹಾಗೂ ಡಿಜಿಟಲ್ ವ್ಯವಹಾರದ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು. ಶಾಖಾ ವ್ಯವಸ್ಥಾಪಕ ಮನೋಹರ್ ಹೆಜಮಾಡಿ ಸ್ವಾಗತಿಸಿದರು, ಶಾಖೆಯ ಹಿರಿಯ ಸಿಬ್ಬಂದಿ ಮೀರಾ ಪೂಜಾರಿ ವಂದನಾರ್ಪಣೆ ಗೈದರು. ನವೋದಯ ಸ್ವ ಸಹಾಯ ಸಂಘದ ಪ್ರೇರಕಿ ಕಾಂತಿ ಎಸ್.ಆಚಾರ್ಯ ಪ್ರಾರ್ಥನೆ ಗೈದರು. ಈ ಸಂದರ್ಭದಲ್ಲಿ ಶಾಖಾ ಸಿಬ್ಬಂದಿಗಳಾದ ಮೀರಾ ಪೂಜಾರಿ, ಶ್ರೀನಿಧಿ ರಾವ್, ಅಕ್ಷತಾ, ನವೋದಯ ಸ್ವ ಸಹಾಯ ಸಂಘದ ಪ್ರೇರಕರಾದ ಕಾಂತಿ ಎಸ್ ಆಚಾರ್ಯ, ವಿಮಲಾ ದಯಾನಂದ್ ಉಪಸ್ಥಿತರಿದ್ದರು.

Exit mobile version