Site icon ಉಡುಪಿ ನ್ಯೂಸ್ ಪ್ಲಸ್

ಹೆಜಮಾಡಿ ಅಲ್-ಅಝ್ಹರ್ ಶಾಲೆ ಬೆಳ್ಳಿ ಹಬ್ಬದ ಪ್ರಯುಕ್ತ ವಿವಿಧ ಕಾರ್ಯಕ್ರಮಗಳಿಗೆ ಇಂದು ಚಾಲನೆ

ಕಾಪು ತಾಲೂಕಿನ ಹೆಜಮಾಡಿಯ ಅಲ್-ಅಝ್ಹರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳ್ಳಿ ಹಬ್ಬದ ಪ್ರಯುಕ್ತ ಡಿಸೆಂಬರ್ 28ರಿಂದ 31ರವರೆಗೆ ವಿವಿಧ ಕಾರ್ಯಕ್ರಮಗಳಿಗೆಕೆ.ಎಮ್.ಅಬ್ದುಲ್ಲಾ  ಇಂದು ಚಾಲನೆ ನೀಡಿದರು  ಯಾರೂ ವಿದ್ಯಾರ್ಥಿಗಳು ವಿದ್ಯಾರ್ಜನೆ ಯಲ್ಲಿ ವಂಚಿತರಾಗಬಾರದು ಎಂದು ಜನಾಬ್ ಕೆ.ಎಮ್.ಅಬ್ದುಲ್ಲಾ ಹೇಳಿದರು. ಅವರು ಹೆಜಮಾಡಿಯ ಅಲ್ ಅಝ್ ಹರ್ ಆಂಗ್ಲ ಮಾದ್ಯಮ ಶಾಲೆ ಯ ಬೆಳ್ಳಿಹಬ್ಬದ ಕಾರ್ಯಕ್ರಮ ವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಈ ಪುಟ್ಟ ಊರು ಕನ್ನಂಗಾರಿನ ಮತ್ತು ಆಸುಪಾಸಿನ ಯಾವುದೇ ವಿದ್ಯಾರ್ಥಿಗಳು ಶಿಕ್ಷಣ ದಿಂದ ವಂಚಿತರಾಗಬಾರದು.ಎಲ್ಲರೂ ಆಂಗ್ಲ ಭಾಷೆಯಲ್ಲಿ ಶಿಕ್ಷಣ ವನ್ನು ಪಡೆಯಬೇಂಬ ಉತ್ತಮ ಉದ್ದೇಶದಿಂದ ಈ ಶಿಕ್ಷಣ ಸಂಸ್ಥೆ ಯನ್ನು ಊರಿನ ಯುವಕರು ಕನ್ಮಂಗಾರ್ ಎಜುಕೇಷನ್ ಟ್ರಸ್ಟ್ ಎಂಬ ಹೆಸರಿನಲ್ಲಿ ಸ್ಥಾಪನೆ ಮಾಡಿ ಇಪ್ಪತ್ತೈದು ವರ್ಷಗಳ ಈ ಸಂದರ್ಭದಲ್ಲಿ ತುಂಬಾ ಹೆಮ್ಮೆ ಅನಿಸುತ್ತದೆ ಎಂದರು.ಈ ಸಂದರ್ಭದಲ್ಲಿ ಸಮಾಜಮುಖಿ ಸಾಧನೆಯನ್ನು ಮಾಡಿದ ಎಂಎಸ್ ಅಬ್ದುಲ್ಲಾ ರವರನ್ನು ಸನ್ಮಾನಿಸಲಾಯಿತು.ವೇದಿಕೆಯಲ್ಲಿ ಕೆ.ಎಸ್‌. ಶೇಕಬ್ಬ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಎಮ್. ಜೆ.ಮೊಹಮ್ಮದ್,ಮೋಹನ್ ಸುವರ್ಣ,ಮೊಹಮ್ಮದ್ ಶಫೀಕ್,ಶಾಹಿನ್,ಮಯ್ಯದ್ದಿ ಕನ್ನಂಗಾರ್ ,ಕ್ರಿಸ್ಟಾಫರ್ ಕೋಟ್ಯಾನ್,ಪ್ರನವ್,ಶಿಹಾಬ್, ಹಮ್ಝಾಅಹ್ಮದ್,ಮೊಹಮದ್ ರಝಾಕ್, ಉಪಸ್ಥಿತರಿದ್ದರು. ಎಮ್.ಎಸ್.ಅಬ್ದುಲ್ ರಝಾಕ್ ವಂದಿಸಿದರು.

Exit mobile version