Site icon ಉಡುಪಿ ನ್ಯೂಸ್ ಪ್ಲಸ್

ಹೆಜಮಾಡಿ : ಅಲ್-ಅಝ್ಹರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಡಿಸೆಂಬರ್ 28ರಿಂದ 31ರವರೆಗೆ ಬೆಳ್ಳಿ ಹಬ್ಬಕಾರ್ಯಕ್ರಮ

ಕಾಪು ತಾಲೂಕಿನ ಹೆಜಮಾಡಿಯ ಅಲ್-ಅಝ್ಹರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಬೆಳ್ಳಿ ಹಬ್ಬದ ಪ್ರಯುಕ್ತ ಡಿಸೆಂಬರ್ 28ರಿಂದ 31ರವರೆಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಶಾಲೆಯ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಶಾಲೆಯ ಸಂಚಾಲಕರಾದ ಕೆ.ಎಸ್.ಶೇಖಬ್ಬ ಮಾಹಿತಿ ನೀಡಿದರು.ಅಂಧ ಕಲಾವಿದರಿಂದ ಸಂಗೀತ ರಸಮಂಜರಿ, ರಕ್ಷಕರಿಂದ ಆಹಾರೋತ್ಸವ, ಹಳೇ ವಿದ್ಯಾರ್ಥಿಗಳಿಂದ ‘ನಾ ಕಲಿತ ಶಾಲೆಯಲ್ಲಿ ಒಂದು ದಿನ’, ಶಿಕ್ಷಕಿಯರಿಂದ ಮನೋರಂಜನಾ ಕಾರ್ಯಕ್ರಮ, ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ, ಮಂಗಳೂರು ಡಾನ್ಸ್ ಅಕಾಡೆಮಿಯಿಂದ ನೃತ್ಯ ವೈಭವ, ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅತಿಥಿಗಳಾಗಿ ಎಚ್.ಬಿ ಮೊಹಮ್ಮದ್, ಶಾಸಕ ಲಾಲಾಜಿ ಮೆಂಡನ್, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಂಗಳೂರು ವಿವಿ ಅಸೋಸಿಯೇಟ್ ಪ್ರೊಪೆಸರ್ ಡಾ|| ಅಬುಬಕ್ಕರ್ ಸಿದ್ದಿಕ್, ಡಿ. ಡಿ.ಪಿ.ಐ ಗಣಪತಿ, ಬಿಇಒ ಚಂದ್ರಗೌಡ ಡಿ.ಎಚ್, ಡಾ|| ಮೊಹಮ್ಮದ್ ಇಸ್ಮಾಯಿಲ್, ಇಬ್ರಾಹಿಂ ಶರೀಫ್, ಇನಾಯತ್ ಆಲಿ ಮುಲ್ಕಿಮತ್ತಿತರು ಆಗಮಿಸಲಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ  ಕನ್ನಂಗಾರ್ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎಚ್.ಬಿ ಮೊಹಮ್ಮದ್, ಕಾರ್ಯದರ್ಶಿ ಎಮ್. ಐ ಮೊಹಮ್ಮದ್, ಕೋ ಆರ್ಡಿನೇಟರ್ ಹಂಝ ಅಹಮದ್,  ಪ್ರಾಂಶುಪಾಲೆ ಶಾಹಿನ್,ಅಬ್ದುಲ್ ರಝಾಕ್  ಅಬ್ದುಲ್ ಖಾದರ್,   ಉಪಸ್ಥಿತರಿದ್ದರು.

Exit mobile version