Site icon ಉಡುಪಿ ನ್ಯೂಸ್ ಪ್ಲಸ್

ಶಿರ್ವ: ಟೆಂಪೋ ಟ್ರಾವೆಲರ್ – ಕಾರು ನಡೆವೆ ಅಪಘಾತ ಇಬ್ಬರು ಗಂಭೀರ

ಶಿರ್ವ: ಟೆಂಪೋ ಟ್ರಾವೆಲರ್ – ಕಾರು ನಡೆವೆ ಅಪಘಾತ ಇಬ್ಬರು ತೀವ್ರವಾಗಿ ಗಾಯಗೊಂಡು ಮಣಿಪಾಲ ಆಸ್ಪತ್ರೆಗೆ ದಾಖಲಾದ ಘಟನೆ ಭಾನುವಾರ ರಾತ್ರಿ 11:00  ಗಂಟೆಗೆ ಸಂಭವಿಸಿದೆ. ಮಲ್ಪೆಯಿಂದ ಬೆಂಗಳೂರಿಗೆ ಹೋಗುತ್ತಿದ್ದ ಟೆಂಪೋ ಟ್ರಾವೆಲರ್, ಬೆಣ್ ನಿಂದ ಶಿರ್ವಕ್ಕೆ ಬರುತ್ತಿದ್ದ ಕಾರಿಗೆ ಮುಖಾಮುಖಿ ಢಿಕ್ಕಿ ಆಗಿದ್ದು ಕಾರಿನಲ್ಲಿದ್ದ ಶಿರ್ವ ಮಟ್ಟಾರಿನ ದಿನೇಶ್ ಮತ್ತು ಸೂರಜ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಶಿರ್ವ ಪೊಲೀಸರು ಸ್ಥಳದಲ್ಲಿದ್ದು, ತನಿಖೆ ನಡೆಸುತ್ತಿದ್ದಾರೆ.

Exit mobile version