Site icon ಉಡುಪಿ ನ್ಯೂಸ್ ಪ್ಲಸ್

ಮಂಗಳೂರು ವಿವಿಯ ಪದವಿ ಫಲಿತಾಂಶಕ್ಕೆ ವಿಳಂಬ ಧೋರಣೆ ವಿರುದ್ದ ಎಬಿವಿಪಿ ಕಾರ್ಯಕರ್ತರ ಮುತ್ತಿಗೆ..

ಮಂಗಳೂರು: ಇಂದು ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಮಂಗಳೂರು ವಿವಿಯ  ಪದವಿ ಫಲಿತಾಂಶಕ್ಕೆ ವಿಳಂಬ ಧೋರಣೆ ಅನುಸರಿಸುತ್ತಿರುವುದನ್ನು ಪ್ರಶ್ನಿಸಿ ಎಬಿವಿಪಿ ಕಾರ್ಯಕರ್ತರು  ಮುತ್ತಿಗೆ ಹಾಕಿದ ಘಟನೆ ನಡೆದಿದೆ.  ಈ ವೇಳೆ ಪೊಲೀಸರು ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ತಳ್ಳಾಟ ನಡೆದಿದೆ.ಇಂದು ಮಂಗಳೂರು ವಿವಿಯ ಪರೀಕ್ಷಾ ಫಲಿತಾಂಶ ವಿಳಂಬದ ವಿರುದ್ಧ ಎಬಿವಿಪಿ ನೇತೃತ್ವದಲ್ಲಿ  ಡೆದ ಪ್ರತಿಭಟನೆ ತಾರಕಕ್ಕೇರಿದ್ದು ಪೊಲೀಸರು, ಎಬಿವಿಪಿ ಕಾರ್ಯಕರ್ತರ ನಡುವೆ ನೂಕಾಟ, ತಳ್ಳಾಟ ನಡೆದಿದೆ. ಸುಮಾರು 400 ರಷ್ಟಿದ್ದ ಎಬಿವಿಪಿ ವಿದ್ಯಾರ್ಥಿಗಳು ಮಂಗಳೂರು ವಿ.ವಿ ಆಡಳಿತ ಸೌಧದ ಆವರಣಕ್ಕೆ ಬಂದಾಗ ಪೊಲೀಸರು ಅವರನ್ನ ತಡೆದಿದ್ದಾರೆ. ಎಬಿವಿಪಿ ಕಾರ್ಯಕರ್ತರು ಬ್ಯಾರಿಕೇಡ್ಗಳನ್ನು ತಳ್ಳಿ ಆಡಳಿತ ಸೌಧದೊಳಗೆ ನುಗ್ಗಿದ್ದು ಪೊಲೀಸರು ಅವರನ್ನ ತಡೆಯಲು ಯತ್ನಿಸಿದ್ದು ಈ ವೇಳೆ ತಳ್ಳಾಟ ಉಂಟಾಗಿದೆ.
Exit mobile version