ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಕರ್ನಾಟಕ ವತಿಯಿಂದ ಡಿಸೆಂಬರ್ 21 ರಿಂದ 27 ರ ವರೆಗೆ ಮೂಡುಬಿದಿರೆ ವಿದ್ಯಾಗಿರಿಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಸಂಕೀರ್ಣದಲ್ಲಿ “ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ” ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಇಂದು ದಿನಾಂಕ 19-12-2022 ರಂದು ಉಡುಪಿಯಿಂದ ಹೊರೆ ಕಾಣಿಕೆ ತಲುಪಿಸಿದ್ದು, ಶಾಸಕರಾದ ಶ್ರೀ ಕೆ. ರಘುಪತಿ ಭಟ್ ಅವರು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾll. ಮೋಹನ್ ಆಳ್ವ ಅವರಿಗೆ ಹೊರೆಕಾಣಿಕೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ರಾಜ್ಯ ಆಯುಕ್ತರಾದ ಪಿ.ಜಿ.ಆರ್ ಸಿಂಧ್ಯಾ, ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್, ಗಂಗಾಧರ್ ರಾಯ್, ಬಿ.ಜಿ ಶೆಟ್ಟಿ, ವಿಶ್ವನಾಥ್ ಶೆಣೈ, ಮುರಳಿ ಕಡೆಕಾರ್, ವಾಸುದೇವ್ ಭಟ್, ಭುವನ ಪ್ರಸಾದ್ ಹೆಗ್ಡೆ ಮತ್ತು ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ನ ಪದಾಧಿಕಾರಿಗಳು ಉಪಸ್ಥಿತರಿದ್ದರು.