ಉಡುಪಿ ನ್ಯೂಸ್ ಪ್ಲಸ್

ಕಾಪು ಬೀಚ್ ನಲ್ಲಿ ಮೂರು ದಿನಗಳ ಕಡಲ ಐಸಿರ ಕಾರ್ಯಕ್ರಮ

ಕಾಪು ಸಮುದ್ರ ಕಿನಾರೆಯಲ್ಲಿ ಲಾಲ್ ಬಹುದ್ದೂರ್ ಸ್ಪೋರ್ಟ್ಸ್ ಕ್ಲಬ್, ದಿ.ಆರ್ ಮೆಂಡನ್ ಜನ್ಮಶತಾಬಿ ಹಾಗೂ ಕಾಪು ಪಡುಶಾಲಾ ವಾರ್ಷಿಕೋತ್ಸವದ ಪ್ರಯುಕ್ತ ಮೂರು ದಿನಗಳ ಕಾಲ ನಡೆಯಲಿರುವ ಕಡಲ ಐಸಿರ ಕಾರ್ಯಕ್ರಮವನ್ನು ಕಾಪು ಪುರಸಭಾ ಅಧಿಕಾರಿ ವೆಂಕಟೇಶ್ ನಾವಡ ಉದ್ಘಾಟಿಸಿದರು. ಧ್ವಜಾರೋಹಣವನ್ನು ಮುಂಬೈ ಮೊಗವೀರ ಸಭಾದ ಸದಸ್ಯ ಬಿ.ಎಂ.ಕರ್ಕೇರಾ ನೆರವೇರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ವಹಿಸಿದ್ದರು. ಈ ಸಂದರ್ಭ ಕಾಪು ಲೀಲಾದರ ಶೆಟ್ಟಿ, ವಿಠಲ್ ಗುರಿಕಾರ, ಶಾಲಾ ಮುಖ್ಯ ಶಿಕ್ಷಕಿ ಉಷಾ, ಶೀಲರಾಜ ಪುತ್ರನ್, ಸಚಿನ್ ಪುತ್ರನ್, ಕುಶ ಸಾಲ್ಯಾನ್, ವಿದ್ಯಾರ್ಥಿ ನಾಯಕ ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.

Exit mobile version