ಮಾನ್ಯ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರು ಶ್ರೀಯುತ ಲಾಲಾಜಿ ಆರ್ ಮೆಂಡನ್ ರವರು ಕರ್ನಾಟಕ ಪಬ್ಲಿಕ್ ಸ್ಕೂಲ್ ಪಡುಬಿದ್ರೆ (ಪ್ರಾಥಮಿಕ ವಿಭಾಗ) ಇಲ್ಲಿನ ವಿವೇಕ ಯೋಜನೆಯಡಿ ಮಾನ್ಯ ಶಾಸಕರ ಶಿಫಾರಸ್ಸಿನ ಮೇರೆಗೆ 55.6 ಲಕ್ಷ ಮೊತ್ತದಲ್ಲಿ ನೂತನ ನಾಲ್ಕು ಕೊಠಡಿಗಳ ನಿರ್ಮಾಣಕ್ಕೆ ಕಾಮಗಾರಿ ಶಿಲಾನ್ಯಾಸವನ್ನು ನೆರವೇರಿಸಿದರು ಹಾಗೂ ನೂತನವಾಗಿ ನಿರ್ಮಾಣಗೊಂಡ ಶೌಚಾಲಯ ಕೊಠಡಿಗಳನ್ನು ಉದ್ಘಾಟಿಸಿದರು ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ರವಿ ಶೆಟ್ಟಿ, ಉಪಾಧ್ಯಕ್ಷರು ಯಶೋಧ ಕುಮಾರಿ, ಶಾಲಾ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷರು ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗ್ರಾಮ ಪಂಚಾಯತ್ ಸದಸ್ಯರಾದ ರವಿ ಶೆಟ್ಟಿ, ಹೇಮಚಂದ್ರ, ಶಾಲಾ ಪ್ರಾಥಮಿಕ ವಿಭಾಗ ಮುಖ್ಯಶಿಕ್ಷಕರು ಕೃಷ್ಣನಂದ, ಹೈಸ್ಕೂಲ್ ವಿಭಾಗ ಮುಖ್ಯಶಿಕ್ಷಕರು ಪ್ರಸನ್ನ, ಪದವಿ ಪೂರ್ವ ವಿಭಾಗ ಮುಖ್ಯಶಿಕ್ಷಕರು ಅನುರಾಧ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರು ಕೃಷ್ಣ ಬಂಗೇರ, ಶಿಕ್ಷಣ ಇಲಾಖೆ ಸಂಯೋಜಕರು ಶಂಕರ್, ಅಭಿವೃದ್ಧಿ ಸಮಿತಿ ಸದಸ್ಯರು ವಿನಯ, ರವೀಂದ್ರ, ಭಾರತಿ, ಲೋಕೇಶ್ ಕಂಚಿನಡ್ಕ ಹಾಗೂ ಗುತ್ತಿಗೆದಾರರು, ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು
