ಉಡುಪಿ ನ್ಯೂಸ್ ಪ್ಲಸ್

ಅದಾನಿ ಯುಪಿಸಿಎಲ್ ಕಂಪನಿ ದೇಶೀಯ ಕಲ್ಲಿದ್ದಲು ಬಳಸುವ ಹುನ್ನಾರ ಅರೋಪ; ಎಲ್ಲೂರು ಗ್ರಾಮ‌ಸಭೆಯಲ್ಲಿ ವಿರುದ್ದ ನಿರ್ಣಯ

ಎಲ್ಲೂರಿನಲ್ಲಿರುವ ಯುಪಿಸಿಎಲ್ ಕಂಪನಿ ದೇಶೀಯ ಕಲ್ಲಿದ್ದಲು ಬಳಸುವ ಹುನ್ನಾರದ ಆರೋಪ: ಎಲ್ಲೂರು ಗ್ರಾಮ ಸಭೆಯಲ್ಲಿ ವಿರುದ್ಧ ನಿರ್ಣಯ ಜನ ವಿರೋಧದ ನಡುವೆಯೂ ಎಲ್ಲೂರು ಗ್ರಾಮದಲ್ಲಿ ಕಾರ್ಯಾಚರಿಸುತ್ತಿರುವ ಕಲ್ಲಿದ್ದಲು ಆಧಾರಿತ ಅದಾನಿ ಯುಪಿಸಿಎಲ್‌ ಕಂಪನಿಯು ವಿದೇಶಿ ಕಲ್ಲಿದ್ದಲು ಬಳಸಿ ವಿದ್ಯುತ್ ಉತ್ಪಾದನೆ ನಡೆಸುವ ಒಡಂಬಡಿಕೆ ಇದ್ದರೂ, ಇದೀಗ ಅದು ಜನರಿಗೆ ಸಮಸ್ಯೆಯೊಡ್ಡುವ ದೇಶೀ ಕಲ್ಲಿದ್ದಲು ಬಳಸುವ ಹುನ್ನಾರ ನಡೆಸುತ್ತಿದೆ ಎಂಬುದಾಗಿ ಎಲ್ಲೂರು ಗ್ರಾಮಸಭೆಯಲ್ಲಿ ಆಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಅದರ ವಿರುದ್ಧ ನಿರ್ಣಯ ಕೈಗೊಳ್ಳಲಾಗಿದೆ. ಎಲ್ಲೂರು ಗ್ರಾಪಂ ಸಭಾಭವನದಲ್ಲಿ ನಡೆದ ಗ್ರಾಮ ಸಭೆಯಲ್ಲಿ ನಿರ್ಣಯ ಮಾಡಲಾಗಿದೆ. ಕಂಪನಿಯಲ್ಲಿ ಅಧಿಕ ಹಾರು ಬೂದಿ ಸಮಸ್ಯೆ ಸೃಷ್ಠಿಯಾಗಿ ಈ ಭಾಗದ ಜನ ಜನ ಚರ್ಮರೋಗಾಧಿ ಶ್ವಾಸಕೋಶ, ಸಹಿತ ಕ್ಯಾನ್ಸರ್ ರೋಗದಿಂದ ಬಳಲುವ ಬಗ್ಗೆ ಇಷ್ಟರಲ್ಲೇ ಆರೋಗ್ಯ ಇಲಾಖೆ ವರದಿ ನೀಡಿರುವುದು ಗಮನಾರ್ಹ ವಾಗಿದೆ ಎಂದು ಗ್ರಾಮಸ್ಥ ನಾಗೇಶ ರಾವ್‌ ಆರೋಪಿಸಿದ್ದಾರೆ. ಇದೇ ಸಂದರ್ಭ ದಾರಿದೀಪ, ನಳ್ಳಿನೀರು ಸಮರ್ಪಕವಾಗಿ ಸರಬರಾಜು ಮಾಡುವಂತೆ ಗ್ರಾ.ಪಂ.ನ್ನು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಈ ವೇಳೆ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರ ಮಧ್ಯೆ ಗ್ರಾಮಸ್ಥ ಮಧ್ಯದಲ್ಲೇ ಮಾತಿನ ಚಕಮಕಿ ನಡೆಯುವ ಮೂಲಕ ಗ್ರಾ.ಪಂ.ನಲ್ಲಿ ಎಲ್ಲವೂ ಸರಿಇಲ್ಲ ಎಂಬುದು ಸಾಭೀತಾಗಿದೆ.

Exit mobile version