Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ( ರಿ ) ಕಾಪು. ನೂತನ ಪದಾಧಿಕಾರಿಗಳ ಆಯ್ಕೆ.

ಕಾಪು : ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಕಾಪು ತಾಲೂಕು ಸಮಿತಿಗೆ ಮುಂದಿನ 2 ವರ್ಷಗಳಿಗೆ ಕಾಪುವಿನ ಹೋಟೆಲ್ K 1 ನಲ್ಲಿ ಚುನಾವಣೆ ನಡೆದು 15 ವ್ಯಕ್ತಿಗಳ ಆಯ್ಕೆ ನಡೆಯಿತು. ಈ ಚುನಾವಣಾ ಪ್ರಕ್ರಿಯೆಯನ್ನು ಜಿಲ್ಲಾ ಉಸ್ತುವಾರಿಯಾಗಿ ಆಯ್ಕೆಗೊಂಡಿರುವ ಜನಾಬ್ ಇಬ್ರಾಹಿಮ್ ಕೋಟಾ, ಇಸ್ಮಾಯಿಲ್ ಹುಸೈನ್ ಕಟಪಾಡಿ , ಖತೀಬ್ ಅಬ್ದುಲ್ ರಶೀದ್, S. K. ಇಕ್ಬಾಲ್ ಕಟಪಾಡಿ ನಡೆಸಿಕೊಟ್ಟರು. ಮುಹಮ್ಮದ್ ಹಾಶಿಮ್ ಸಾಹೇಬ್ ರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸಭಾ ಅಧ್ಯಕ್ಷರಾದ ಶಬೀ ಅಹಮದ್ ಕಾಝೀ ಪ್ರಾಸ್ತಾವಿಕ ಮತ್ತು ಸ್ವಾಗತ ಭಾಷಣ ಮಾಡಿದರು. ರಿಯಾಜ್ ನಜಿರ್ ರವರು ಕಳೆದ ಅವಧಿಯ ವರದಿ ಮಂಡಿಸಿದರು.
ಕಳೆದ ಅವಧಿಯಲ್ಲಿ ಸದಸ್ಯರಾಗಿ ಮತ್ತು ಪದಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ ಜನಾಬ್ ಶಬೀ ಅಹಮದ್ ಕಾಝಿ, ಅನ್ವರ್ ಅಲಿ ಕಾಪು, ರಿಯಾಜ್ ನಜಿರ್ , ಮುಸ್ತಾಕ್ ಇಬ್ರಾಹಿಮ್, ಮುಹಮ್ಮದ್ ಇಕ್ಬಾಲ್ ಮಜೂರು , K. H. ಉಸ್ಮಾನ್, ನಸೀರ್ ಅಹಮದ್, ಆಝಮ್ ಶೇಕ್, ಅಬ್ದುಲ್ ಹಮೀದ್ ಪಡುಬಿದ್ರಿ ತಮ್ಮ ಅನಿಸಿಕೆಗಳನ್ನು ವ್ಯಕ್ತ ಪಡಿಸಿದರು. ಆಯ್ಕೆಯಾದ 15 ಸದಸ್ಯರನ್ನು ಜನಾಬ್ ಇಬ್ರಾಹೀಮ್ ಕೋಟಾ ಅಭಿನಂದಿಸಿದರು. ಚುನಾವಣಾ ನಿಯಮಗಳನ್ನು ಖತೀಬ್ ಅಬ್ದುಲ್ ರಶೀದ್ ಮತ್ತು ಇಸ್ಮಾಯಿಲ್ ಹುಸೈನ್ ರವರು ವಿವರಿಸಿದರು. ವಿವಿದ ಮಸ್ಜಿದ್, ಮದ್ರಸ , ಸಂಘ , ಸಂಸ್ಥೆ ಗಳ ವತಿಯಿಂದ 91 ಸದಸ್ಯರುಗಳು ಭಾಗವಹಿಸುವ ಪಟ್ಟಿ ಒಕ್ಕೂಟಕ್ಕೆ ತಲುಪಿತ್ತು.
ಆಯ್ಕೆಯಾದ ಸದಸ್ಯರುಗಳು.
ಎಡದಿಂದ ಬಲಕ್ಕೆ,
1, ಅನ್ವರ್ ಅಲಿ ಕಾಪು.
2, ಮುಹಮ್ಮದ್ ಇಕ್ಬಾಲ್ ಸಾಹೇಬ್ ಮಜೂರು.
3, ಶಬೀ ಅಹಮದ್ ಕಾಝೀ.
4, ನಸೀರ್ ಅಹಮದ್.
5, Y. M. ಇಲಿಯಾಸ್ ಕಟಪಾಡಿ
6, ಅಬ್ದುಲ್ ರಝಾಕ್.
7, B. M. ಮೊಯಿದಿನ್.
8, ಮುಸ್ತಾಕ್ ಇಬ್ರಾಹಿಮ್
9, ಆಝಮ್ ಶೇಕ್.
10, ರಿಯಾಜ್ ನಜಿರ್
11, ಅಬ್ದುಲ್ ಹಮೀದ್.
ಉಳಿದಂತೆ
12, ಅಮೀರ್ ಹಂಝ ಕಾಪು.
13, ರಮೀಜ್ ಪಡುಬಿದ್ರಿ.
14, ಮುಹಮ್ಮದ್ ಸಾದಿಕ್
15, ಸುಲೇಮಾನ್.
S. K. ಇಕ್ಬಾಲ್ ರವರು ಧನ್ಯವಾದ ಸಲ್ಲಿಸಿದರು.
ಅನ್ವರ್ ಅಲಿ ಕಾಪು ಕಾರ್ಯಕ್ರಮ ನಿರೂಪಿಸಿದರು.
S. K. ಇಕ್ಬಾಲ್ ರವರು ಧನ್ಯವಾದ ಸಲ್ಲಿಸಿದರು.

Exit mobile version