Site icon ಉಡುಪಿ ನ್ಯೂಸ್ ಪ್ಲಸ್

ಪಡುಬಿದ್ರಿಯ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಮೇಲಿನ ಪದರಿನ ಡಾಂಬರು ತೆರೆದು ನವೀಕರಣ ನಿರಂತರ ಅಪಘಾತಗಳ ಸರಮಾಲೆ.

ಮಂಗಳೂರಿನಿಂದ ಪಡುಬಿದ್ರಿಯವರೆಗೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರಸ್ತೆಯ ಮೇಲಿನ ಪದರಿನ ಡಾಂಬರು ತೆಗೆಯಲಾಗುತ್ತಿದ್ದು ಇದರಿಂದ ನಿರಂತರ ಬೈಕ್ ಅಪಘಾತ ಸಂಭವಿಸಿದ ಘಟನೆ ಶುಕ್ರವಾರ ರಾತ್ರಿ 9:00 ಸುಮಾರಿಗೆ ನಡೆದಿದೆ. ಹೆದ್ದಾರಿಯ ಮೇಲಿನ ಪದರನ್ನು ತೆಗೆಯುತ್ತಿದ್ದಾಗ ರಸ್ತೆಯಲ್ಲಿ ವಾಹನ ಸಂಚಾರ ಮಾಡದಂತಹ ಪರಿಸ್ಥಿತಿ ನೆಲೆಸುತ್ತಿದೆ. ಇದರಿಂದ ದ್ವಿಚಕ್ರವಾಹನ ಸವಾರರು ಮಗುಚಿ ಬಿದ್ದ ಹತ್ತು ಹಲವು ಘಟನೆ ಘಟಿಸಿದೆ ಹೆದ್ದಾರಿಯ ಒಂದು ಪದರನ್ನು ತೆಗೆದಾಗ ಮತ್ತೊಂದು ಪದರನ್ನು ಅದರ ಮೇಲೆ ಹಾಕಿದಾಗ ರಸ್ತೆ ಸಮತಟ್ಟಾಗುತ್ತದೆ ಆದರೆ ಅದನ್ನು ಬಿಟ್ಟು ಪದರು ತೆಗೆಯುವ ಕಾಯಕ ಶನಿವಾರ ಬೆಳಿಗ್ಗೆಯೂ ಮುಂದುವರಿದೆ. 

video link

https://youtu.be/HpyQjKs5I80

Exit mobile version