Site icon ಉಡುಪಿ ನ್ಯೂಸ್ ಪ್ಲಸ್

ಸುರತ್ಕಲ್ ಟೋಲ್ ಹಣವನ್ನು ಹೆಜಮಾಡಿ ಟೋಲ್ ನಲ್ಲಿ ಸಂಗ್ರಹಿಸುವ ಆದೇಶದ ವಿರುದ್ಧ ಹೆಜಮಾಡಿಯಲ್ಲಿಸಾಮೂಹಿಕ ಧರಣಿ.

ಸುರತ್ಕಲ್ ಟೋಲ್ ರದ್ದುಗೊಳಿಸಿ ಹೆಜಮಾಡಿಯ ನವಯುಗ ಟೋಲ್ ಕೇಂದ್ರಕ್ಕೆ ವಿಲೀನ ಮಾಡಿರುವ ಹೆದ್ದಾರಿ ಪ್ರಾಧಿಕಾರದ ಆದೇಶ ಹಿಂಪಡೆಯಲು ಒತ್ತಾಯಿಸಿ ಹೆಜಮಾಡಿ ಟೋಲ್ ಕೇಂದ್ರದ ಬಳಿ  ಸಾಮೂಹಿಕ ಧರಣಿ..ಆರಂಭಗೊಂಡಿದೆ ಅಕ್ರಮ ಟೋಲ್ ಸುಲಿಗೆ ಯನ್ನು ತಡೆಯಲು ವಿಫಲರಾದ ಬಿಜೆಪಿ ಶಾಸಕ,ಸಂಸದರುಗಳ ಜನವಿರೋಧಿ ನೀತಿ ಖಂಡಿಸಿ ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿಯಲ್ಲಿ ಸಂಗ್ರಹಿಸುವ ಸುಲಿಗೆ ನೀತಿಯನ್ನು ಕೈ ಬಿಡುವಂತೆ ಒತ್ತಾಯಿಸಿ ಹೆಜಮಾಡಿ ಟೋಲ್ ವಿರೋಧಿ ಸಂಘಟನೆ ಹಾಗೂ ಉಡುಪಿ ಜಿಲ್ಲೆಯ ಸಮಾನ ಮನಸ್ಕ ಸಂಘಟನೆ ಗಳು ಶುಕ್ರವಾರ ಬೆಳಗ್ಗೆ ಯಿಂದ ಹೆಜಮಾಡಿ ಟೋಲ್ ಪ್ಲಾಜಾ ಬಳಿ ಸಾಮೂಹಿಕ ಧರಣಿ ಸಹಿತ ಟೋಲ್ ಸುಲಿಗೆ ವಿರುದ್ದ ಸಾಮೂಹಿಕ ಹೋರಾಟಕ್ಕೆ ಚಾಲನೆ ನೀಡಲಾಯಿತು. ಟೋಲ್ ವಿರೋಧಿ ಹೋರಾಟಗಾರ ಮುನೀರ್ ಕಾಟಿಪಳ್ಳ ಮಾತನಾಡಿ ಟೋಲ್ ವಿರುದ್ಧದ ಹೋರಾಟವೇ ನಮ್ಮ ನಿತ್ಯ ಕಾಯಕವಾಗಿದೆ. ಸುರತ್ಕಲ್ ಟೋಲ್ ಗೇಟ್ ಬಳಿ ೩೫ ದಿವಸ ರಾತ್ರಿ ಹಗಲು ಧರಣಿ ಮಾಡುವ ಮೂಲಕ ಸುರತ್ಕಲ್ ಅಕ್ರಮ ಟೋಲ್ ಗೇಟ್ ಬಂದ್ ಮಾಡುವಲ್ಲಿ ಸಂಘಟನೆ ಸಫಲವಾಯಿತು. ಆದರೂ ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ ಟೋಲ್ ಗೇಟ್ ನಲ್ಲಿ ವಸೂಲಿ ಮಾಡುವ ಆದೇಶ ಕೇಳಿದ ನಂತರ ಆ ಹೋರಾಟ ವನ್ನು ಇಲ್ಲಿಗೆ ಅನಿವಾರ್ಯ ವಾಗಿ ಮಾಡುವ ಪರಿಸ್ಥಿತಿ ಬಂದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಎಲ್ಲಾ ಸಮಾನ ಮನಸ್ಕರು ಇದರಲ್ಲಿ ಕೈ ಜೋಡಿಸುವವರಿದ್ದಾರೆ. ಇವತ್ತಿನ ಜನಸಮೂಹ ನೋಡಿದರೆ ಮುಂದೆ ಬರುವ ಹೋರಾಟ ದಲ್ಲಿ ಎಷ್ಟು ಜನ ಸೇರಬಹುದು ಎಂದು ಊಹೆ ಮಾಡಲೂ ಸಾಧ್ಯವಿಲ್ಲ ಎಂದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ನಾವು ಇಂದು ಚಾಲನೆ ಕೊಟ್ಟ ಹೋರಾಟ ಅನಧಿಕೃತ ಸುಂಕ ವಸೂಲಿ ಯ ವಿರುದ್ಧ. ಪಡುಬಿದ್ರಿ ಯವರು ಮುಲ್ಕಿ ಗೆ ತೆರಳಬೇಕಾದರೆ ದುಪ್ಪಟ್ಟು ದರ ವಸೂಲಿ ಮಾಡುವ ಹುನ್ನಾರ ನಡೆಯುತ್ತಿದೆ. ಇದರ ವಿರುದ್ದ ನಾವು ಪಕ್ಷ ಬೇದ ಮರೆತು ಜಾತ್ಯಾತೀತ ವಾಗಿ ಹೋರಾಟ ಮಾಡುತ್ತಿದ್ದೇವೆ. ಈ ಹೋರಾಟ ಯಾವುದೇ ರಾಜಕೀಯ ಪಕ್ಷದ ಪರ ಅಲ್ಲ. ಇಲ್ಲಿ ಎಲ್ಲಾ ಪಕ್ಷದ ಜನರು ಸೇರಿದ್ದಾರೆ. ಈ ಹೋರಾಟ ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಜನರ ಪರವಾಗಿ ಎಂದರು. ಈ ಸಂದರ್ಭ ವಿನಯ್ ಕುಮಾರ್ ಸೊರಕೆ ,ಮುನೀರ್ ಕಾಟಿಪಳ್ಳ, ನವೀನ್ ಚಂದ್ರ ಜೆ ಶೆಟ್ಟಿ ,ಶೇಖರ್ ಹೆಜಮಾಡಿನವೀನ್ ಚಂದ್ರ ಸುವರ್ಣ ಕಿಶನ್ ಹೆಗ್ಡೆ ಅಶ್ರಫ್  ಶಾಂತಲತಾ ಶೆಟ್ಟಿ, ಆಜೀಝ್ ಹೆಜಮಾಡಿ ,ಕರುಣಾಕರ ಪೂಜಾರಿ , ದೀಪಕ್ ಕೋಟಿಯನ್, ಸುಧಾಕರ್ ಶೆಟ್ಟಿ ಹೆಜಮಾಡಿ, ಸರ್ಪುದ್ದೀನ್ ಶೇಕ್,, ಯಾದವ್ ಶೆಟ್ಟಿ, ಅಮೀರ್ ಕಾಪು, ರಮೀಝ್ ಹುಸೇನ್,ಬಾಲಚಂದ್ರ ಎರ್ಮಾಳ್   ಮುಂತಾದವರು ಉಪಸ್ಥಿತರಿದ್ದರು  

https://youtu.be/Ba0onx64M8o

Exit mobile version