ಉಡುಪಿ ನ್ಯೂಸ್ ಪ್ಲಸ್

ಕೌಟುಂಬಿಕ ಕಲಹದಿಂದ ಬೇಸತ್ತು ಮೂವರು ಮಕ್ಕಳಿಗೆ ವಿಷ ಹಾಕಿ ಮಹಿಳೆ ನೇಣಿಗೆ ಶರಣು

ಮಂಡ್ಯ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿಯೊಬ್ಬರು ಮೂವರು ಮಕ್ಕಳಿಗೆ ವಿಷ ಉಣಿಸಿ ತಾನು ನೇಣಿಗೆ ಶರಣಾಗಿದ್ದಾಳೆ. ಮದ್ದೂರಿನ ಹೊಳೆಬೀದಿ ನಿವಾಸಿ ಉಸ್ನಾ ಕೌಸರ್ (30) ಮೂರು ಮಕ್ಕಳನ್ನು ಕೊಂದು ತಾನು ಸೂಸೈಡ್​ ಮಾಡಿಕೊಂಡ ಮಹಿಳೆ. ಹಾರಿಸ್ (7), ಆಲಿಸಾ (4) ಅನಮ್ ಪಾತಿಮಾ (2) ಮೃತ ಮಕ್ಕಳು. ಮೊದಲು ಮಕ್ಕಳಿಗೆ ವಿಷ ಕುಡಿಸಿ ತಾನು ಸೂಸೈಡ್​ ಮಾಡಿಕೊಂಡಿದ್ದಾರೆ.ಇನ್ನೂ ಈ ನಾಲ್ವರನ್ನು ಅಖಿಲ್ ಅಹಮದ್ ಕೊಲೆ ಮಾಡಿದ್ದಾನೆ ಎಂದು ಕೌಸರ್ ಪೋಷಕರು ಆರೋಪ ಮಾಡಿದ್ದು, ಸದ್ಯ ಅಖಿಲ್ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ. ಸದ್ಯ ಮದ್ದೂರು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದವರ ಹುಡುಕಾಟದಲ್ಲಿದ್ದು, ಪ್ರಕರಣ ಸತ್ಯಾಸತ್ಯತೆಯನ್ನು ತಿಳಿಯಲು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Exit mobile version