Site icon ಉಡುಪಿ ನ್ಯೂಸ್ ಪ್ಲಸ್

ಉಡುಪಿ:ಡಿ. 24ರಂದು ರಾಷ್ಟ್ರಮಟ್ಟದ ಫ್ರೋ ಕಬ್ಬಡಿ ಪಂದ್ಯಾಟ

ಡಿ. 24ರಂದು ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ನೆನಪಿನಲ್ಲಿ ಆಯೋಜಿಸಿರುವ ಅಟಲ್ ಉತ್ಸವ ಅಂಗವಾಗಿ ನಡೆಯಲಿರುವ ರಾಷ್ಟ್ರಮಟ್ಟದ ಪ್ರೋ ಕಬಡ್ಡಿ ಪಂದ್ಯಾಟದ ಉದ್ಘಾಟನೆಗೆ ಕೇಂದ್ರದ ಯುವ ವ್ಯವಹಾರ ಮತ್ತು ಕ್ರೀಡಾ ಮಾಹಿತಿ ತಂತ್ರಜ್ಞಾನ ಮತ್ತು ಪ್ರಸಾರ ಇಲಾಖೆ ಸಚಿವ ಅನುರಾಗ್ ಠಾಕೂರ್ ಗೆ ಆಹ್ವಾನ ನೀಡಲಾಯಿತು. ಅಟಲ್ ಉತ್ಸವದ ಅಂಗವಾಗಿ ಡಿ. 24ರಂದು ನಗರದಲ್ಲಿ ಪ್ರೊ ಕಬ್ಬಡಿ ಪಂದ್ಯಾಟ ಎಂಜಿಎಂ ಮೈದಾನದಲ್ಲಿ ನಗರ ಮತ್ತು ಗ್ರಾಮಾಂತರ ಬಿಜೆಪಿ ನೇತೃತ್ವದಲ್ಲಿ ನಡೆಯಲಿದೆ. ಈ ಪಂದ್ಯಾಟದ ಉದ್ಘಾಟಕರಾಗಿ ಕೇಂದ್ರ ಸಚಿವ ಅನುರಾಗ್ ಠಾಕೂರ್ ಗೆ ಆಹ್ವಾನಿಸಲಾಗಿದ್ದು, ಶಾಸಕ ಕೆ. ರಘುಪತಿ ಭಟ್ ಮತ್ತು ನಗರ ಬಿಜೆಪಿ ಅಧ್ಯಕ್ಷ ಮಹೇಶ್ ಠಾಕೂರ್ ಹೊಸದಿಲ್ಲಿಯಲ್ಲಿ ಸಚಿವರನ್ನು ಭೇಟಿಯಾಗಿ ಆಗಮಿಸುವ ಭರವಸೆ ನೀಡಿದ್ದಾರೆ.

 

Exit mobile version