ಉಡುಪಿ ನ್ಯೂಸ್ ಪ್ಲಸ್

ಬೋಟ್‌ನಲ್ಲಿ ವಿದ್ಯುತ್ ಪ್ರವಹಿಸಿ ಕಾರ್ಮಿಕ ಸಾವು

ವಿದ್ಯುತ್ ಆಘಾತದಿಂದ ಬೋಟಿನಲ್ಲಿ ಕೆಲಸ ಮಾಡುವ ಕಾರ್ಮಿಕರೊಬ್ಬರು ಮೃತಪಟ್ಟ ಘಟನೆ ಮಲ್ಪೆ ಬಂದರಿನಲ್ಲಿ ನಡೆದಿದೆ.ಮೃತರನ್ನು ಉತ್ತರಪ್ರದೇಶ `ಬೀರ್ ಸಿಂಗ್ ಪುರದ ಮನೋಜ್ ಕುಮಾರ (20) ಎಂದು ಗುರುತಿಸಲಾಗಿದೆ ಮಲ್ಪೆ ಬಂದರಿಗೆ ಬಂದು ಮೀನು ಖಾಲಿ ಮಾಡಿ ಬೋಟ್ ನ್ನು ಬಂದರಿನ ಪಶ್ಚಿಮ ಬದಿಯ ಧಕ್ಕೆ ಯಲ್ಲಿ ಲಂಗರು ಹಾಕಿ ಬೋಟಿನ ದುರಸ್ತಿ ಕಾರ್ಯ ಇರುವುದರಿಂದ ಬೊಟಿನ ಮಾಲಕರು ಅನಿಲ್ ಎಂಬ ಪಿಟ್ಟರ ನ್ನು ಕರೆದುಕೊಂಡು ಬಂದಿದ್ದು  ಮನೋಜ್ ಕುಮಾರ ರವರಿಗೆ ಸಹಾಯಕರಾಗಿ ಕೆಲಸ ಮಾಡಲು ಮಾಲಕರು ತಿಳಿಸಿದ್ದು , ವೇಲ್ಡಿಂಗ್ ಕೆಲಸ ಮಾಡುತ್ತಿರುವಾಗ ಜನರೇಟರಿಗೆ ಅಳವಡಿಸಿದ ವೈಲರ್ ನಲ್ಲಿ ಅಧಿಕ ವಿದ್ಯುತ್ ಪ್ರವಹಿಸಿ ತೀವ್ರ ಅಸ್ವಸ್ಥಗೊಂಡರು.ಗಂಭೀರ ಸ್ಥಿತಿಯಲ್ಲಿದ್ದ ಅವರು ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟಿದ್ದಾರೆ. ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version