
ಸಾರ್ವಜನಿಕ ಸಾರಿಗೆ ಸಹಿತ ಇಡೀ ದೇಶದ ವಾಹನ ಸವಾರರ ಅಕ್ರಮ ಸುಲಿಗೆ ಸುರತ್ಕಲ್ ಟೋಲ್ ನಲ್ಲಿ ನಡೆಯುವುದರ ವಿರುದ್ದ. ಸುರತ್ಕಲ್ ಕೋಲ್ ಕೇಂದ್ರವನ್ನು ಹೆಜಮಾಡಿ ಟೋಲ್ ಕೇಂದ್ರದ ಜತೆ ವಿಲೀನಗೊಳಿಸಿರುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ನಾಗರಿಕರಿಗೆ ಟೋಲ್’ ಬರೆ ಎಳೆದಿದ ಸುರತ್ಕಲ್ ಟೋಲ್ ನ್ನು ಬಂದ್ ಮಾಡುತ್ತೇವೆ ಎಂದು ಉಭಯ ಜಿಲ್ಲೆಯ ನಾಗರಿಕರಿಗೆ ಮಂಕುಬೂದಿ ಎರಚಿದ ಹೆದ್ದಾರಿ ಇಲಾಖೆ. ಸುರತ್ಕಲ್ ಟೋಲ್ ಶುಲ್ಕ ಹೆಜಮಾಡಿ ಟೋಲ್ ಗೆ ಸೇರಿಸಿದ್ದಲ್ಲಿ ಉಭಯ ಜಿಲ್ಲೆಯ ನಾಗರಿಕರೊಂದಿಗೆ ನಾವು ಸೇರಿ ಪಕ್ಷಾತೀತವಾಗಿ ಉಗ್ರ ಪ್ರತಿಭಟನೆ ಮಾಡಲಾಗುವುದು ಎಂದು ಮಾಜಿ ಸಚಿವ ಅಭಯಚಂದ್ರ ಜೈನ್ ಹೇಳಿದರು. ಅವರು ಕಾಪು ಪ್ರೆಸ್ ಕ್ಲಬ್ ನಲ್ಲಿ ಸೋಮವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿ ಈ ವರೆಗೆ ನಾವು ಮಾಡಿದ ಹೋರಾಟಕ್ಕೆ ಜಯ ಸಿಕ್ಕಿದೆ. ಇದರ ಫಲವಾಗಿ ಡಿಸೆಂಬರ್ ಒಂದರಿಂದ ಟೋಲ್ ಬಂದ್ ಮಾಡಲಾಗುತ್ತದೆ ಎಂದು ಮಾಹಿತಿ ಸಿಕ್ಕಿದೆ ಎಂದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ಹೆದ್ದಾರಿ ಪ್ರಾಧಿಕಾರ ನಮ್ಮ ತಾಳ್ಮೆ ಯನ್ನು ಪರೀಕ್ಷಿಸುವ ಅಗತ್ಯ ವಿಲ್ಲ.ನಮ್ಮ ಜಿಲ್ಲೆಯ ಜನರು ಬುದ್ದಿ ವಂತರಿದ್ದಾರೆ. ಹೆದ್ದಾರಿ ಮಾರ್ಗವನ್ನು ಉಪಯೋಗಿಸದೆ ಸುಂಕ ಕಟ್ಟಲು ಇದೇನು ಹಿಟ್ಲರ್ ಆಡಳಿತ ವಲ್ಲ. ಪಡುಬಿದ್ರಿ ಯವರು ಮುಲ್ಕಿ ಅಥವಾ ಹಳೆಯಂಗಡಿ ಕಡೆಗೆ ಹೋಗುವ ಸಂದರ್ಭಗಳಲ್ಲಿ ಅನಾವಶ್ಯಕ ವಾಗಿ ಸುರತ್ಕಲ್ ಟೋಲ್ ಸುಂಕವನ್ನು ಹೆಜಮಾಡಿ ಯಲ್ಲಿ ಸೇರಿಸಿ ತೆಗೆದು ಕೊಳ್ಳುವ ಅಥವಾ ಒಂದು ಕಿ.ಮೀ.ದೂರದ ಮೂಲ್ಕಿ ಯವರು ಹೆಜಮಾಡಿ ಪೇಟೆಗೆ ಬರಬೇಕಾದರೆ ಸುರತ್ಕಲ್ ಟೋಲ್ ಶುಲ್ಕ ಕಟ್ಟುವ ಈ ಪ್ರಕ್ರಿಯೆ ಅಸಂಬದ್ಧ ಹಾಗೂ ಹಾಸ್ಯಾಸ್ಪದ ವಾಗಿದೆ. ಇದನ್ನು ಮುಂದುವರೆಸಿದ್ದಲ್ಲಿ ಮಂಗಳೂರು ಮತ್ತು ಉಡುಪಿ ಜಿಲ್ಲೆಯ ಎಲ್ಲಾ ನಾಗರಿಕರನ್ನು ಸೇರಿಸಿಕೊಂಡು ಹೋರಾಟ ಮಾಡುವ ಅನಿವಾರ್ಯ ಪರಿಸ್ಥಿತಿ ಉದ್ಭವಿಸುವ ಸಂಭವ ದೂರವಿಲ್ಲ. ಪರಿಣಾಮವಾಗಿ ಏನಾದರೂ ಅಚಾತುರ್ಯ ನಡೆದಲ್ಲಿ ಇಲ್ಲಿನ ಶಾಸಕರು ,ಸಂಸದರು ಹೊಣೆಗಾರರು ಎಂದರು. ಟೋಲ್ ಹೋರಾಟ ಗಾರ ಮುನೀರ್ ಕಾಟಿಪಳ್ಳ ಮಾತನಾಡಿ ಉಭಯ ಜಿಲ್ಲೆಯ ಎಲ್ಲಾ ಶಾಸಕ ರು,ಸಂಸದರು ಆಡಳಿತ ಪಕ್ಷದ ಬೀಜೇಪಿ ಯವರೇ. ಇವರು ಮನಸ್ಸು ಮಾಡಿದರೆ ಜಿಲ್ಲೆಯ ಜನತೆಗೆ ನ್ಯಾಯ ದೊರಕಿಸಿ ಕೊಡಲು ಕಷ್ಟದ ಕೆಲಸ ವಲ್ಲ. ಅದರೆ ಇವರೆಲ್ಲ ಕಿವಿ ಇದ್ದೂ ಕಿವುಡರು. ದೇಶದ ಗ್ರಹಮಂತ್ರಿಗಳೇ ಹೇಳಿದಂತೆ ಸುರತ್ಕಲ್ ಟೋಲ್ ಮಂಗಳೂರು ಬಂದರು ಸಂಚಾರಕ್ಕೆ ಸಂಬಂಧಿಸಿದ್ದು. ಅದು ಹೆದ್ದಾರಿಯ ಎಲ್ಲಾ ವಾಹನ ಗಳ ಶುಲ್ಕ ವಸೂಲಿ ಮಾಡಲು ಅಲ್ಲ.ಆದರೂ ಕಳೆದ ಹಲವು ವರ್ಷಗಳಿಂದ ಕೋಟ್ಯಂತರ ರೂ.ಶುಲ್ಕ ಸಂಗ್ರಹಿಸಿ ಅವರ ಟೆಂಡರ್ ಪ್ರಕಾರ ಇನ್ನು ಕೆಲವೇ ತಿಂಗಳ ಅವಧಿಯಲ್ಲಿ ಮುಗಿಯುತ್ತದೆ. ಅವರ ಏನು ಬಾಕಿ ಶುಲ್ಕ ವಸೂಲಿ ಇದೆಯೋ ಅದನ್ನು ಕೇಂದ್ರ ಅಥವಾ ರಾಜ್ಯ ಸರ್ಕಾರ ಭರಿಸಿ ಟೋಲ್ ಶಾಶ್ವತವಾಗಿ ಬಂದ್ ಮಾಡಿ ಜನರನ್ನು ಹೆದ್ದಾರಿ ದರೋಡೆಯಿಂದ ರಕ್ಷಿಸಬೇಕು. ಸಾಮಾನ್ಯ ಜನರ ಈ ಬೇಡಿಕೆ ಗೆ ಸಕಾರಾತ್ಮಕ ಸ್ಪಂದನೆ ದೊರಕದಿದ್ದಲ್ಲಿ ಸುರತ್ಕಲ್ ನಲ್ಲಿ ಮಾಡಿದ ಧರಣಿ ಯನ್ನು ಹೆಜಮಾಡಿ ಟೋಲ್ ಬಳಿ ಅಹೋರಾತ್ರಿ ಮಾಡಬೇಕಾದೀತು ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಮಾಜಿ ಸಚಿವ ಅಭಯಚಂದ್ರ ಜೈನ್,ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ, ಶೇಖರ್ ಹೆಜಮಾಡಿ, ಮುನೀರ್ ಕಾಟಿಪಳ್ಳ, ಜಿತೇಂದ್ರ ಫುರ್ಟಾಡೊ ಇದ್ದರು.
video link