ಉದ್ಯಾವರ ಬಲಾಯಿಪಾದೆಯ ಅಂಗಡಿಯೊಂದಕ್ಕೆ ನುಗ್ಗಿದ ಕಳ್ಳರು ನಗದು ಕಳವು ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ಈ ಬಗ್ಗೆ ಕೊರಂಗ್ರಪಾಡಿ ಗ್ರಾಮದ ಹೊನ್ನಪ್ಪ ಶಿವಣ್ಣ ಕುಂಬಾರ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಇವರು ಬಲಾಯಿಪಾದೆಯ ಮಹಾಲಕ್ಷ್ಮಿ ಕಾಂಪ್ಲೆಕ್ಸ್‌ನಲ್ಲಿ ಮಂಜುಶ್ರೀ ಹರ್ಬಲ್ ಎಂಬ ಅಂಗಡಿಯನ್ನುನಡೆಸಿಕೊಂಡಿದ್ದಾರೆ.ನ. 25 ರ ರಾತ್ರಿಯಿಂದ ನ 26 ರ ಬೆಳಿಗ್ಗಿನ ಅವಧಿಯಲ್ಲಿ ಈ ಅಂಗಡಿಯ ಶೆಟರ್ ಅನ್ನು ಮುರಿದು ಒಳ ನುಗ್ಗಿದ ಕಳ್ಳರು ಆಫೀಸ್‌ನ ಬೀಗ ಮುರಿದು, ಕ್ಯಾಶ್ ಡ್ರಾವರಿನಲ್ಲಿದ್ದ 46, 000 ರೂ. ಹಣವನ್ನು ಕಳವು ಮಾಡಿಕೊಂಡು ಪರಾರಿಯಾಗಿದ್ದಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
