ಉಡುಪಿ ನ್ಯೂಸ್ ಪ್ಲಸ್

ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪತ್ರಕರ್ತ ರಾಮಚಂದ್ರ ಆಚಾರ್ಯ ರವರಿಗೆ ಪತ್ರಕರ್ತರ ಸಂಘದ ವತಿಯಿಂದ ಸನ್ಮಾನ

ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಿರಿಯ ಪತ್ರಕರ್ತ ರಾಮಚಂದ್ರ ಆಚಾರ್ಯರವರನ್ನು ದಂಪತಿ ಸಮೇತವಾಗಿ ಕಾಪುವಿನ ನಮ್ಮೂರ ಮಂದಾರ ಹೋಟೆಲ್ ಸಭಾಭವನದಲ್ಲಿ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ರಾಮಚಂದ್ರ . ಆಚಾರ್ಯ ಅವರು ಮಾತನಾಡಿ, ಪತ್ರಕರ್ತರು ಯಾವುದೇ ಪೂರ್ವಗ್ರಹ, ರಾಗದ್ವೇಷ ಇಲ್ಲದೆ ವಸ್ತುನಿಷ್ಠವರದಿ ಮಾಡಬೇಕು. ಎಂದರು. ವೇದಿಕೆಯಲ್ಲಿ ಕಾಪು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳು, ಕಾರ್ಯದರ್ಶಿ ಪುಂಡಲಿಕ ಮರಾಠ, ಕೋಶಾಧಿಕಾರಿ ಅಬ್ದುಲ್ ಹಮೀದ್ ಪಡುಬಿದ್ರಿ, ನಮ್ಮೂರ ಮಂದಾರ ಹೋಟೆಲ್ ಮಾಲೀಕ ವಾದಿರಾಜ ನಡಿಮನೆ, ರಾಮಚಂದ್ರ ಆಚಾರ್ಯರವರ ಪತ್ನಿ ರಾಜಲಕ್ಷ್ಮಿ ಆಚಾರ್ಯ, ಜಿಲ್ಲಾ ಸಮಿತಿಯ ಸದಸ್ಯರು ಹಾಗೂ ಪತ್ರಕರ್ತರು ಉಪಸ್ಥಿತರಿದ್ದರು. ಸಂಘದ ಅಧ್ಯಕ್ಷ ಸುರೇಶ್ ಎರ್ಮಾಳು ಸ್ವಾಗತಿಸಿ, ರಾಕೇಶ್ ಕುಂಜೂರು ನಿರೂಪಿಸಿದರು.ಪುಂಡಲಿಕ ಮರಾಠ ವಂದಿಸಿದರು

 

Exit mobile version