Site icon ಉಡುಪಿ ನ್ಯೂಸ್ ಪ್ಲಸ್

ಪಡುಬಿದ್ರೆ ಗ್ರಾ. ಪಂ ‘ಜನಸ್ಪಂದನ ಕಾರ್ಯಕ್ರಮ’ ಜನರ ಅಹವಾಲು ಸ್ವೀಕರಿಸಿದ : ಶಾಸಕ ಲಾಲಾಜಿ ಮೆಂಡನ್

ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಕ್ಷೇತ್ರದ ಪ್ರತಿ ಪಂಚಾಯತ್ ವ್ಯಾಪ್ತಿಯಲ್ಲಿ ಜನಸ್ಪಂದನ ಕಾರ್ಯಕ್ರಮ ನಡೆಸುತ್ತಿದ್ದು ಇಂದು ಪಡುಬಿದ್ರೆ ಗ್ರಾಮ ಪಂಚಾಯತ್ ಗೆ ಭೇಟಿ ನೀಡಿ ಇಲ್ಲಿನ ಸಾರ್ವಜನಿಕರ ಅಹವಾಲು ಸ್ವೀಕರಿಸಿದರು. ವಿವಿಧ ಇಲಾಖೆ ಅಧಿಕಾರಿಗಳ ಉಪಸ್ಥಿತಿಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಲಾಯಿತು
ಪಡುಬಿದ್ರೆ ಪಂಚಾಯತ್ ವ್ಯಾಪ್ತಿಯ ಫಲಾನುಭವಿಗಳಿಗೆ 94ಸಿ ಹಕ್ಕುಪತ್ರ, ಬಸವ ವಸತಿ ಹಾಗೂ ಅಂಬೇಡ್ಕರ್ ನಿಗಮದ ವಸತಿ ಯೋಜನೆಯಯಡಿಯಲ್ಲಿ 21 ಅರ್ಹ ಫಲಾನುಭವಿಗಳಿಗೆ ಮನೆ ಮಂಜೂರಾತಿಯ ಮಂಜೂರಾತಿ ಪತ್ರವನ್ನು, ಮುಖ್ಯಮಂತ್ರಿ ಪರಿಹಾರ ನಿಧಿ 1 ಚೆಕ್, ಪ್ರಾಕೃತಿಕ ವಿಕೋಪ ನಿಧಿ ಚೆಕ್, 36 ಫಲಾನುಭವಿಗಳಿಗೆ ವೃದ್ಧಪ್ಯಾ ವೇತನ-ಸಂಧ್ಯಾ ಸುರಕ್ಷಾ- ಮನಸ್ವಿನಿ ಯೋಜನೆ- ಅಂಗವಿಕಲ ವೇತನ ಹಾಗೂ ತೀರಾ ಹಿಂದುಳಿದ 85 ಕುಟುಂಬಗಳಿಗೆ 85 ನೀರಿನ ಟ್ಯಾಂಕ್, ಕಾರ್ಮಿಕ ಇಲಾಖೆಯಿಂದ 14 ಮಂದಿ ನೋಂದಾಯಿತ ಕಾರ್ಮಿಕರಿಗೆ ಎಲೆಕ್ಟ್ರಿಷಿಯನ್ ಟೂಲ್ ಕಿಟ್, ಪ್ರತಿಭಾವಂತ ವಿದ್ಯಾರ್ಥಿಗಳಿಗೆ 2 ಲ್ಯಾಪ್ಟಾಪ್ ವಿತರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಅಭಿವೃದ್ಧಿ ಕೆಲಸಗಳು ನಡೆದಿದ್ದು ಈ ಭಾಗಗಳಲ್ಲಿ ಹೆಚ್ಚಿನ ರಸ್ತೆಗಳು ಗ್ರಾಮೀಣ ಪ್ರದೇಶದ ಹಳ್ಳಿಗಳನ್ನು ಸಂಪರ್ಕಿಸುವ ರಸ್ತೆಗಳಾಗಿದ್ದು 30 ಕೋಟಿ ರೂಗಳ ವೆಚ್ಚದಲ್ಲಿ ಹೆಚ್ಚಿನ ರಸ್ತೆಗಳನ್ನು ಈಗಾಗಲೇ ಅಭಿವೃದ್ಧಿ ಪಡಿಸಲಾಗಿದೆ. ನಡ್ಸಾಲು ಗ್ರಾಮದ ಕರಾವಳಿ ಪ್ರದೇಶದ 24 ಕುಟುಂಬಗಳಿಗೆ ಹಕ್ಕುಪತ್ರವನ್ನು ಶೀಘ್ರದಲ್ಲಿ ಅಧಿಕಾರಿಗಳೊಂದಿಗೆ ಮಾತಾಡಿ ವಿತರಿಸಲಾಗುವುದು. ಇನ್ನೂ ಹೆಚ್ಚಿನ ಮಟ್ಟದಲ್ಲಿ ಈ ಭಾಗದಲ್ಲಿ ಮೂಲ ಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಅನುದಾನ ನೀಡಲಾಗುವುದು ಹಾಗೂ ಬಿಜೆಪಿ ನೇತೃತ್ವದ ಪಡುಬಿದ್ರೆ ಗ್ರಾಮ ಪಂಚಾಯತ್ ಆಡಳಿತ ಉತ್ತಮ ರೀತಿಯಲ್ಲಿ ಜನರ ಆಶೋತ್ತರಗಳಿಗೆ ಸ್ಪಂದಿಸುತಿದ್ದು ಪಂಚಾಯತ್ ಸದಸ್ಯರು ಜನರೊಂದಿಗೆ ನಿಕಟಸಂಪರ್ಕ ಹೊಂದಿದ್ದು ಜನಪರವಾಗಿ ಕೆಲಸ ಕಾರ್ಯ ಮಾಡುತ್ತಿದ್ದಾರೆ ಎಂದರು
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು ರವಿ ಶೆಟ್ಟಿ, ಉಪಾಧ್ಯಕ್ಷರು ಕುಮಾರಿ ಯಶೋಧ, ಕಾಪು ತಹಸೀಲ್ದಾರ್ ಶ್ರೀನಿವಾಸ್ ಮೂರ್ತಿ ಕುಲಕರ್ಣಿ, ಕಂದಾಯ ನಿರೀಕ್ಷಕರು ಸುಧೀರ್ ಕುಮಾರ್ ಶೆಟ್ಟಿ , ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಚಾಕ್ಷರಿ, ಪಡುಬಿದ್ರೆ ಪ್ರಾಥಮಿಕ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ರಾಜಶ್ರೀ ಕಿಣಿ, ಮೆಸ್ಕಾಂ ಸಹಾಯಕ ಇಂಜಿನಿಯರ್ ಹುಸೇನ್, ಗ್ರಾಮ ಲೆಕ್ಕಧಿಕಾರಿ ಮಥಯಸ್, ಪಿಆರ್ ಇ ಡಿ ಎಂಜಿನಿಯರ್ ಶ್ರೀನಾಥ್, ಕಾಪು ತಾಲೂಕು ಪಂಚಾಯತ್ ಮೆನೇಜರ್ ಸುಂದರ್ ನಾಯಕ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ, ಅರಣ್ಯ ಇಲಾಖೆ ಅಧಿಕಾರಿ,ಕೃಷಿ ಇಲಾಖೆ ಅಧಿಕಾರಿ, ಪಡುಬಿದ್ರೆ ಪೊಲೀಸ್ ಉಪನಿರಿಕ್ಷಕರು ಪ್ರಕಾಶ್, ಪಶುಇಲಾಖೆ ವೈದ್ಯಾಧಿಕಾರಿ ಅರುಣ್ ಹೆಗ್ಡೆ, ಪಂಚಾಯತ್ ಕಾರ್ಯದರ್ಶಿ ರೂಪಾಲತಾ ಹಾಗೂ ಇನ್ನಿತರ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯತ್ ಸದಸ್ಯರುಗಳಾದ ಸಂದೇಶ್ ಶೆಟ್ಟಿ, ಶೋಭಾ ಜೆ ಶೆಟ್ಟಿ, ವಿಜಯಲಕ್ಷ್ಮಿ, ಶಿವಮ್ಮ, ಗೀತಾ, ಶಶಿಕಲಾ, ಮೈಯದಿ, ನೂರ್ ಜಹಾನ್, ರವಿ ಶೆಟ್ಟಿ, ಭವಾನಿ, ಹೇಮಚಂದ್ರ, ವಿನಾಯಕ, ಹರೀಶ್ ಶೆಟ್ಟಿ, ಸುಜಾತಾ, ಶಶಿಕಲಾ, ಅಶೋಕ್ ಪೂಜಾರಿ, ಮಹೇಂದ್ರ , ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಗ್ರಾಮ ಪಂಚಾಯತ್ ಅಧಿಕಾರಿಗಳು, ಪ್ರಮುಖರಾದ ಪ್ರಕಾಶ್ ಶೆಟ್ಟಿ, ಶಶಿಕಾಂತ್ ಪಡುಬಿದ್ರೆ,ನವೀನ್ ಚಂದ್ರ ಶೆಟ್ಟಿ ಗಣೇಶ್ ಕೋಟ್ಯಾನ್ ರಮೀಝ್ ಹುಸೇನ್ ಎಂಎಸ್ ಶಾಪಿ ರವಿರಾಜ್ ಹೆಗ್ಡೆ ಹಾಗೂ ವಿವಿಧ ಯೋಜನೆಗಳ ಅರ್ಹ ಫಲಾನುಭವಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು

Exit mobile version