ಉಡುಪಿ ನ್ಯೂಸ್ ಪ್ಲಸ್

ಚಿನ್ನಾಭರಣ ಕಳವುಗೈದ ಫೇಸ್ಟುಕ್ ನಲ್ಲಿ ಪರಿಚಯಗೊಂಡ ಸ್ನೇಹಿತ ಪ್ರಕರಣ ದಾಖಲು

ಫೇಸ್ ಬುಕ್ ಮೂಲಕ ಪರಿಚಯಗೊಂಡ ಸ್ನೇಹಿತನೊಬ್ಬಯಕ್ಷಗಾನ ಕಲಾವಿಧನ ಮನೆಯ ಬೀಗ ಒಡೆದು ಸಾವಿರಾರು ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿರುವ ಘಟನೆ ಬೈಂದೂರು ತಾಲೂಕಿನ ಶಿರೂರು ಗ್ರಾಮದಲ್ಲಿ ಬೆಳಕಿಗೆ ಬಂದಿದೆ. ಶಿರೂರು ಗ್ರಾಮದ ಮೇಲ್ವೇಟೆ ನಿವಾಸಿ 34ವರ್ಷದ ಸಂತೋಷ ಮೊಗವೀರ ಅವರ ಮನೆಯಲಿ ಕಳತನ ನಡೆದಿದೆ. ಇವರು ಯಕ್ಷಗಾನ ಕಲಾವಿದರಾಗಿದ್ದು, ಚಿಕ್ಕಮೇಳ ಎಂಬ ಯಕ್ಷಗಾನವನ್ನು ನಡೆಸಿಕೊಂಡಿದ್ದರು. ಇವರು ಮೇಳದ ಸಾಮಾಗ್ರಿಗಳೊಂದಿಗೆ ಶಿರೂರು ಗ್ರಾಮದ ಶಿರೂರು ಮೇಲೆಟೆ ಎಂಬಲ್ಲಿ ಸುಭಾಷ್ ಪ್ರಭು ಅವರ ಒಂದು ಕೊಠಡಿಯಲ್ಲಿ ವಾಸವಾಗಿದ್ದರು. ಇವರಿಗೆ ಎರಡು ವರ್ಷಗಳ ಹಿಂದೆ ಫೇಸ್ ಬುಕ್ ನಲಿ ಗುರುರಾಜ್ ಎಂಬುವವನ ಪರಿಚಯವಾಗಿತ್ತು. ನ.9ರಂದು ಸಂತೋಷ್ ಅವರ ಕೊಠಡಿಗೆ ಬಂದು ಅವರೊಂದಿಗೆ ಉಳಿದುಕೊಂಡಿದ್ದನು.ಸಂತೋಷ್ ಅವರು ಚಿಕ್ಕಮೇಳ ಕಾರ್ಯಕ್ರಮದ ಪ್ರಯುಕ್ತ ಕುಂದಾಪುರ ತಾಲೂಕಿನ ಹೆರಿಕುದ್ರು . ಎಂಬಲ್ಲಿಗೆ ಹೊರಟಿದ್ದರು.ಅವರೊಂದಿಗೆ ಗುರುರಾಜ್ ಕೂಡ ಹೋಗಿದ್ದನು. ಈ ವೇಳೆ ಗುರುರಾಜ್ ಕಾರ್ಯಕ್ರಮದ ವಿಡಿಯೋ  ವಿಡಿಯೋ ಮಾಡುವ ಉದ್ದೇಶದಿಂದ ಮೊಬೈಲ್ ಪಡೆದಿದ್ದನು. ಬಳಿಕ ಅವರಿಗೆ ತಿಳಿಸದೇ ಶಿರೂರು ಮೇಲೈಟೆಗೆ ಬಂದು ಸಂತೋಷ್ ವಾಸ್ಥವ್ಯವಿರುವ ಕೊಠಡಿಯ ಬೀಗವನ್ನು ಒಡೆದು ಬ್ಯಾಗ್ ನಲ್ಲಿಟ್ಟಿದ್ದ 12 ಗ್ರಾಂ ತೂಕದ ಚಿನ್ನದ ಕೊರಳಿನ ಚೈನ್, 4 ಗ್ರಾಂ ತೂಕದ ಚಿನ್ನದ ಉಂಗುರ, ಕಾಣಿಕೆ ಡಬ್ಬಿಯಲ್ಲಿದ್ದ 10 ಸಾವಿರ ನಗದು, ಇನ್ನೊಂದು ಡಬ್ಬಿಯಲ್ಲಿದ್ದ 1 ಸಾವಿರ ರೂ. ನಗದು ಹಾಗೂ 14 ಸಾವಿರ ಮೌಲ್ಯದ ರಿಯಲ್‌ಮಿ ಮೊಬೈಲ್ ಫೋನ್ ಅನ್ನು ಕದ್ದುಕೊಂಡು ಪರಾರಿಯಾಗಿದ್ದಾನೆ.ಕಳವಾದ ಸೊತ್ತುಗಳ ಒಟ್ಟು ಮೌಲ್ಯ 85 ಸಾವಿರ ರೂ. ಆಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

 

Exit mobile version