ಉಡುಪಿ ನ್ಯೂಸ್ ಪ್ಲಸ್

ಕಾಪು ಸರಕಾರಿ ಕಾಲೇಜಿನಲ್ಲಿ ಹೊಸ ಕಟ್ಟಡ “ಮುತ್ತು” ವಿಗೆ ಶಿಲನ್ಯಾಸ

1992 ರಲ್ಲಿ ಸ್ಥಾಪನೆಯಾದ ಕಾಪುವಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿಗೆ 30 ವರ್ಷ ಆದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಹೊಸ ಕಟ್ಟಡ “ಮುತ್ತು” ವಿಗೆ ಶಿಲಾನ್ಯಾಸ ನೆರವೇರಿತು.ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಅವರು ಶಿಲಾನ್ಯಾಸ ನೆರವೇರಿಸಿದರು. ಈ ಸಂದರ್ಭದಲ್ಲಿ ಚಿತ್ರನಟ ಭೋಜರಾಜ್ ವಾಮಂಜೂರು, ಕಾಲೇಜು ಪ್ರಾಂಶುಪಾಲ ಸ್ಟೀವನ್ ಕ್ವಾಡ್ರಸ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರೋಶಿ ಯಶ್ವಂತ್, ವಿದ್ಯಾರ್ಥಿ ಪರಿಷತ್ತಿನ ನಾಯಕ ಗೌರವ್ ಕಾಲೇಜು ಅಡಳಿತ ಮಂಡಳಿಯ ಸದಸ್ಯರು, ಬೋಧಕ ಮತ್ತು ಭೋಧಕೇತರ ಸಿಬ್ಬಂದಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Exit mobile version