Site icon ಉಡುಪಿ ನ್ಯೂಸ್ ಪ್ಲಸ್

ಕುಂಜೂರು : ಶ್ರೀ ದುರ್ಗಾ ಮಿತ್ರ ವೃಂದದ ನೇತೃತ್ವದಲ್ಲಿ ಮತ್ತು ಶ್ರೀ ದುರ್ಗಾ ಸೇವಾ ಸಮಿತಿ ಮತ್ತು ಶ್ರೀ ದುರ್ಗಾ ದೇವಸ್ಥಾನದ ಸಹಭಾಗಿತ್ವದೊಂದಿಗೆಚಿಣ್ಣರ ಕಲರವ ಕಾರ್ಯಕ್ರಮ ಉದ್ಘಾಟನೆ

ಕಾಪು, ನ. ೨೧ : ಕುಂಜೂರು ಶ್ರೀ ದುರ್ಗಾ ಮಿತ್ರ ವೃಂದದ ನೇತೃತ್ವದಲ್ಲಿ ಮತ್ತು ಶ್ರೀ ದುರ್ಗಾ ಸೇವಾ ಸಮಿತಿ ಮತ್ತು ಶ್ರೀ ದುರ್ಗಾ ದೇವಸ್ಥಾನದ ಸಹಭಾಗಿತ್ವದೊಂದಿಗೆ ದೇಗುಲದ ಸಭಾಂಗಣದಲ್ಲಿ ನ. ೨೦ರಂದು ಚಿಣ್ಣರಿಗಾಗಿ ಆಯೋಜಿಸಲಾಗಿದ್ದ ಚಿಣ್ಣರ ಕಲರವ ಕಾರ್ಯಕ್ರಮವನ್ನು ಐದು ಮಂದಿ ಚಿಣ್ಣರು ದೇಗುಲದಲ್ಲಿ ಬೆಳಗಿದ ದೀಪಗಳನ್ನು ವೇದಿಕೆಗೆ ತಂದು ಉದ್ಘಾಟಿಸಿದರು.
ಶ್ರೀ ದುರ್ಗಾ ಮಿತ್ರವೃಂದದ ಅಧ್ಯಕ್ಷ ಚಂದ್ರಹಾಸ ಆಚಾರ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಮಾಜಿ ಯೋಧ ಅನಂತಾರಾಮ್ ರಾವ್ ಕುಂಜಗುತ್ತು, ಎಲ್ಲೂರು ಗ್ರಾ.ಪಂ. ಸದಸ್ಯರಾದ ವಸಂತಿ ಮಧ್ವರಾಜ್, ವೈ. ಯಶವಂತ ಶೆಟ್ಟಿ , ಶ್ರೀ ದುರ್ಗಾ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯ ಸತೀಶ್ ಕುಂಡಂತಾಯ, ದುರ್ಗಾ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಸುದರ್ಶನ್ ವೈ.ಎಸ್., ದುರ್ಗಾ ಮಿತ್ರವೃಂದದ ಗೌರವಾಧ್ಯಕ್ಷ ವೇ| ಮೂ| ಚಕ್ರಪಾಣಿ ಉಡುಪ, ಉಚ್ಚಿಲ ಸರಸ್ವತಿ ಮಂದಿರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಬಾಬುರಾಯ ಆಚಾರ್ಯ, ಉದ್ಯಮಿ ದಿನೇಶ್ ಕುಮಾರ್, ರಾಜ ಶೆಟ್ಟಿ ಕುಂಜೂರು, ದೇಗುಲದ ಪ್ರಬಂಧಕ ರಾಘವೇಂದ್ರ ಶೆಟ್ಟಿ, ಮಹಿಳಾ ಘಟಕದ ಸಂಚಾಲಕಿ ಜ್ಯೋತಿ ಅತಿಥಿಗಳಾಗಿದ್ದರು. ಚಿಣ್ಣರ ಕಲರವ ಕಾರ್ಯಕ್ರಮದಲ್ಲಿ ನಾಲ್ಕು ವಿಭಾಗಗಳಲ್ಲಿ ವಿವಿಧ ಸ್ಪರ್ಧೆಗಳನ್ನು ನಡೆಸಲಾಗಿದ್ದು, ಅಂಗನವಾಡಿ, ಎಲ್.ಕೆ.ಜಿ ಯಿಂದ ತೊಡಗಿ ಒಂಬತ್ತು – ಹತ್ತನೇ ತರಗತಿಯವರೆಗಿನ ಸುಮಾರು ೩೫೦ ಕ್ಕೂ ಅಽಕ ಮಂದಿ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಬಾಬುರಾಯ ಆಚಾರ್ಯ, ಸುರೇಶ್ ಕುಲಾಲ್, ಜ್ಯೋತಿ, ಶ್ರೀಮತಿ, ಸಾರಿಕಾ ಶೆಟ್ಟಿ, ಮಾಧವಿ ಭಟ್, ಪ್ರಕಾಶ್ ಆಚಾರ್ಯ, ಭಾರ್ಗವ ಕುಂಡಂತಾಯ, ಕೌಶಿಕ್ ಉಡುಪ ಮತ್ತು ದುರ್ಗಾ ಮಿತ್ರವೃಂದ ಮಹಿಳಾ ವಿಭಾಗದ ಸದಸ್ಯರು ಸ್ಪರ್ಧೆ ಆಯೋಜನೆಯಲ್ಲಿ ಸಹಕರಿಸಿದರು.
ಶ್ರೀ ದುರ್ಗಾ ಮಿತ್ರ ವೃಂದದ ಕಾರ್ಯದರ್ಶಿ ಮಾಜಿ ಅಧ್ಯಕ್ಷ ರಾಕೇಶ್ ಕುಂಜೂರು ಸ್ವಾಗತಿಸಿದರು. ಮಾಜಿ ಅಧ್ಯಕ್ಷ ಸತೀಶ್ ಶೆಟ್ಟಿ ಗುಡ್ಡೆಚ್ಚಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

Exit mobile version