ಉಡುಪಿ ನ್ಯೂಸ್ ಪ್ಲಸ್

ಕಮರಿಗೆ ಉರುಳಿ ಬಿದ್ದ ಕಾರು : ವಿದ್ಯಾರ್ಥಿ ಸಾವು ಇಬ್ಬರಿಗೆ ಗಂಭೀರ ಗಾಯ

ಕಾರ್ಕಳ: ಕಾರೊಂದು ಕಾರ್ಕಳ ತಾಲೂಕಿನ ಬೋಳ ಕೆದಿಂಜೆ ಸಮೀಪದ ಮಂಜರಪಲ್ಕೆ ಎಂಬಲ್ಲಿ ಕಮರಿಗೆ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ವಿದ್ಯಾರ್ಥಿ ಸಾವನ್ನಪ್ಪಿದ್ದು ಇಬ್ಬರು ಮಹಿಳೆಯರು ಗಂಭೀರ ಗಾಯಗೊಂಡ ಘಟನೆ ಸಂಭವಿಸಿದೆ. ಉಚ್ಚಿಲ ಮೂಲದ ವೈಷ್ಣವ್ ಮೃತ ವಿದ್ಯಾರ್ಥಿಯಾಗಿದ್ದಾನೆ.ಇವರು ಉಡುಪಿಯ ಖಾಸಗಿ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿ, ಕಾರಿನಲ್ಲಿದ್ದ ಇನ್ನಿಬ್ಬರು ಮಹಿಳೆಯರಿಗೂ ಗಂಭೀರ ಗಾಯಗಳಾಗಿದ್ದು, ಅವರನ್ನು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಬೆಂಗಳೂರಿಗೆ ಹೋಗಿದ್ದು ಅಲ್ಲಿಂದ ಹಿಂದಿರುಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿದೆ. ಕಾರ್ಕಳದಿಂದ  ಬೆಳ್ಯಣ್ ಕಡೆಗೆ ಸಾಗುತ್ತಿದ್ದ ಕಾರು ಮಂಜರಪಲ್ಕೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಕಮರಿಗೆ . ಉರುಳಿ ಬಿದ್ದಿದೆ. ಕಾರಿನಲ್ಲಿ ಇಬ್ಬರು ಮಕ್ಕಳು, ಇಬ್ಬರು ಮಹಿಳೆಯರು ಸೇರಿದಂತೆ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದರೆನ್ನಲಾಗಿದೆ. ಘಟನಾ ಸ್ಥಳಕ್ಕೆಕಾರ್ಕಳ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

Exit mobile version