ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಬಲ್ಕೀಸ್ ಬಾನು ಇವರರು ಬೆಳಗ್ಗಿನ ಜಾವ 3:00 ಗಂಟೆಗೆ ಬಾತ್‌ರೂಮ್‌ಗೆ ಹೋಗುವರೇ ಎದ್ದು ನೋಡಿದಾಗ ಮನೆಯ ಹಿಂದುಗಡೆಯ ಲೈಟ್ ಒನ್ ಇದ್ದು ಹಿಂದುಗಡೆ ಬಾಗಿಲು ಕೂಡ ತೆರೆದಿರುತ್ತದೆ.ಇದನ್ನು ಕಂಡು ಆ ಕೂಡಲೇ ತನ್ನ ಮಗನನ್ನು ಎಬ್ಬಿಸಿ ಆತನಿಗೆ ವಿಚಾರ ತಿಳಿಸಿದ್ದು ನಂತರ ನೋಡಲಾಗಿ ಮನೆಯ ಹಿಂದುಗಡೆಯ ಮರದ ಬಾಗಿಲಿಗೆ ಹಾಕಿದ್ದ ಟವರ್ ಲಾಕ್‌ನ್ನು ಪಕ್ಕದಲ್ಲಿದ್ದ ಕಿಟಕಿಯ ಮುಖಾಂತರ ಯಾವುದೋ ಸಾಧನವನ್ನು ಬಳಸಿ ಮೋಟಾರ್ ಸೈಕಲಿನ ಸೈಡ್ ಮಿರರ್ ಉಪಯೋಗಿಸಿ ಯಾರೋ ಕಳ್ಳರು ಟವರ್ ಲಾಕ್ ತೆಗೆದು ಮನೆಯ ಒಳಗಡೆ ಪ್ರವೇಶಿಸಿ ಕೋಣೆಯ ಒಳಗಡೆ ಇದ್ದ ಮರದ ಕಪಾಟಿನ ಒಳಗಡೆ ಇಟ್ಟಿದ್ದ ಬಂಗಾರದ ಸೊತ್ತುಗಳಾದ 24 ಗ್ರಾಮ್ ತೂಕದ ಖಡ್ಗ ತರಹದ ಕೈ ಬಲೆ -1, 28 ಗ್ರಾಮ್ ತೂಕದ ಬಂಗಾರದ ಉದ್ದ ಸರ -1, 16 ಗ್ರಾಮ್ ತೂಕದ ಮುತ್ತಿನ ಹಾರ-1, 6 ಗ್ರಾಮ್ ತೂಕದ ಉಂಗುರ-2. 16 ಗ್ರಾಮ್ ತೂಕದ ರಿಂಗ್ ಇದ್ದ ಬ್ರಾಸ್‌ಲೈಟ್ -1, 16 ಗ್ರಾಮ್ ತೂಕದ ಕೈ ಬಲೆ-1 ಈ ಎಲ್ಲಾ ಸೊತ್ತುಗಳನ್ನು ಹೊರಗಡೆ ಬ್ಯಾಗ್‌ನಲ್ಲಿಟ್ಟಿದ್ದ ಬೀಗದ ಕೀಯನ್ನು ಉಪಯೋಗಿಸಿ ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಸಮಯದಲ್ಲಿ ಕಪಾಟಿನ ಬಾಗಿಲು,ಮನೆಯ ಹಿಂದಿನ ಬಾಗಿಲು ಜಖಂ ಆಗಿರುವುದಿಲ್ಲ. ಕಳವಾದ ಬಂಗಾರದ ಸೊತ್ತುಗಳ ಅಂದಾಜುಮೌಲ್ಯ ರೂ 4.24.000/- ಆಗಿದ್ದು ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
