
“69” ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನಾ ಕಾರ್ಯಕ್ರಮ, ರೈತರ ಸಮಾವೇಶ ಹಾಗೂ ರೈತರಿಂದ ಡಾ| ಎಮ್. ಎನ್. ರಾಜೇಂದ್ರ ಕುಮಾರ್ ಅವರಿಗೆ ಸನ್ಮಾನ, ಕೃಷಿ ಸಹಾಯಧನ ವಿತರಣೆ, ಶೀತಲೀಕರಣ ಶವ ಪೆಟ್ಟಿಗೆ ಸಾರ್ವಜನಿಕ ಉಪಯೋಗಕ್ಕೆ ಹಸ್ತಾಂತರವು ವೈ. ಲಕ್ಷ್ಮಣ ಸಭಾಂಗಣ, ಸಹಕಾರ ಸಂಗಮ ಪಡುಬಿದ್ರಿ ಇಲ್ಲಿ ಏರ್ಪಡಿಸಲಾಯಿತು “ಈ ಸಂದರ್ಭದಲ್ಲಿ ಮಾತನಾಡಿದ ಮಹಾ ಮಂಡಲ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಪ್ರತಿ ಬಾರಿ ಜನಪರ ಕಾಳಜಿ ಯೊಂದಿಗೆ ಕಾಲಕ್ಕೆ ತಕ್ಕಂತೆ ಸಕಾರಾತ್ಮಕ ಬೆಳವಣಿಗೆ ಮೂಲಕ ವೇಗದ ಅಭಿವೃದ್ಧಿ ಯಲ್ಲಿ ಸಾಗುತ್ತಿರುವ ಪಡುಬಿದ್ರಿ ಸೊಸೈಟಿ ಯು ಇತರ ಸಂಸ್ಥೆ ಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.೧೦೦ ಕೋಟಿ ಠೇವಣಿ ಸಂಗ್ರಹ ಮಾಡುವ ಮೂಲಕ ವಿಶಿಷ್ಟ ಸಾಧನೆ ಗೈದ ಸೊಸೈಟಿಯು ಆದಷ್ಟು ಬೇಗ ೧೫೦ ಕೋಟಿ ಸಂಗ್ರಹಿಸುವ ಮೂಲಕ ಮತ್ತಷ್ಟು ಪ್ರಶಸ್ತಿ ಗೆ ಭಾಜನವಾಗಲಿ ಎಂದರು. ಡಾ.ರಾಜೇಂದ್ರ ಕುಮಾರ್ ಅವರನ್ನು ಸೊಸೈಟಿ ವ್ಯಾಪ್ತಿಯ ರೈತರು ಕ್ರಷಿ ಪರಿಕರಗಳ ತದ್ರೂಪ ಗಳನ್ನು ನೀಡಿ ಸನ್ಮಾನಿಸಿದರು. ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಮಾತನಾಡಿ ರೈತರಿಗೆ ಪ್ರಾಶಸ್ತ್ಯ ನೀಡಿ ಸಹಕಾರಿ ಸಪ್ತಾಹ ಆಚರಿಸುವ ಮೂಲಕ ಸೊಸೈಟಿ ಶ್ಲಾಘನೀಯ ಕಾರ್ಯ ಮಾಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರ ಪರಿಷತ್ ಗೆ ಮಾನ್ಯತೆ ನೀಡಬೇಕು ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಸರ್ಕಾರ ವನ್ನು ಒತ್ತಾಯಿಸಿದರು. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಡಾ.ಐ.ದೇವಿ ಪ್ರಸಾದ್ ಶೆಟ್ಟಿ
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸೊಸೈಟಿಯ ನಿರ್ದೇಶಕ ಗಿರೀಶ್ ಪಲಿಮಾರ್ ಮತ್ತು ಪತ್ರಕರ್ತ ಎ.ರಾಮಚಂದ್ರ ಆಚಾರ್ಯ ರನ್ನು ಅಭಿನಂದಿಸಲಾಯಿತು. ಸೊಸೈಟಿ ವ್ಯಾಪ್ತಿಯ ೧೦೦ ಕ್ಕೂ ಅಧಿಕ ರೈತರಿಗೆ ಕ್ರಷಿ ಸಹಾಯ ಧನ, ಪಡುಬಿದ್ರಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢ ವಿಭಾಗ,ಪಲಿಮಾರ್ ಶಾಲೆಗೆ ವೈಟ್ ಲಿಪ್ಟರ್ ಯಶಸ್ವಿನಿ ವಿ.ಭಂಡಾರಿ ಗೆ ಸಹಾಯ ಧನ, ಅವರಾಲು ಅಂಗನವಾಡಿ ಗೆ ೨೫ ಕುರ್ಚಿ ವಿತರಣೆ ಹಾಗೂ ಶೀತಲೀಕರಣ ಶವಪೆಟ್ಟಿಗೆ ಸಾರ್ವಜನಿಕ ಉಪಯೋಗ ಕ್ಕೆ ಹಸ್ತಾಂತರಿಸಲಾಯಿತು. ಉಡುಪಿ ಜಿಲ್ಲಾ ಕ್ರಷಿಕ ಸಂಘದ ಅಧ್ಯಕ್ಷ ರಾಮಕ್ರಷ್ಣ ಬಂಟಕಲ್ ದಿಕ್ಸೂಚಿ ಭಾಷಣ ಮಾಡಿದರು. ವೈ.ಸುಧೀರ್ ಕುಮಾರ್ ಅಧ್ಯಕ್ಷ ತೆ ವಹಿಸಿದ್ದರು. ಎಸ್.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ, ಉಡುಪಿ ಜಿಲ್ಲಾ ಸಹಕಾರಿ ಸಂಘಗಳ ಉಪನಿಭಂಧಕ ಲಕ್ಷ್ಮೀ ನಾರಾಯಣ ಜಿ.ಎನ್, ಕುಂದಾಪುರ ಉಪ ವಿಭಾಗ ಸಹಾಯಕ ಉಪನಿಭಂಧಕಿ ಲಾವಣ್ಯ ಕೆ.ಆರ್ ಉಪಸ್ಥಿತರಿದ್ದರು. ರಾಜೇಶ್ ಸೇರಿಗಾರ್ ನಿರೂಪಿಸಿದರು. ಗುರುರಾಜ್ ಪೂಜಾರಿ ವಂದಿಸಿದರು.
