ಉಡುಪಿ ನ್ಯೂಸ್ ಪ್ಲಸ್

ಹದಿನೈದು ಅಡಿ ಆಳದ ತ್ಯಾಜ್ಯ ನೀರು ಸಂಗ್ರಹಣ ಗುಂಡಿಗೆ ಬಿದ್ದ ಗೂಳಿಯ ರಕ್ಷಣೆ.

ಉಡುಪಿ,ನ.14; ಹದಿನೈದು ಅಡಿ ಆಳದ ತ್ಯಾಜ್ಯ ನೀರು ಸಂಗ್ರಹಣ ಗುಂಡಿಯಲ್ಲಿ ಬಿದ್ದಿದ್ದ ಗೂಳಿಯನ್ನು ಅಗ್ನಿಶಾಮಕ ದಳ, ಹಾಗೂ ನಾಗರಿಕ ಸಮಿತಿಯ ಕಾರ್ಯಕರ್ತರು ಸತತ ಮೂರು ಗಂಟೆಗಳ ಕಾರ್ಯಚರಣೆ ಮೂಲಕ ರಕ್ಷಿಸಿರುವ ಘಟನೆ ಸೋಮವಾರ ಮಣಿಪಾಲದಲ್ಲಿ ನಡೆದಿದೆ. ಕಾರ್ಯಚರಣೆಯಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿಗಳು, ನಾಗರಿಕ ಸಮಿತಿಯ ನಿತ್ಯಾನಂದ ಒಳಕಾಡು, ಹೇಮಂತ್ ಸದಾನಂದ ಭಂಡಾರಿ ಇದ್ದರು.

ಎರಡು ಬಲಿಷ್ಠ ಗೂಳಿಗಳು ಕಾದಟ ನಡೆಸುತ್ತಿದ್ದವು. ಕಾದಟ ಮುಂದುವರಿಸುತ್ತ ಎರಡು ಗೂಳಿಗಳು ಆರ್.ಎಸ್.ಬಿ ಸಂಭಾಗಣದ ಸನಿಹ ಇರುವ ಕಂಪೌಂಡಿನ ಬಾಗಿಲು ತಳ್ಳಿಕೊಂಡು ಒಳ ಪ್ರವೇಶಿಸುವೆ. ಕಾದಾಟದಲ್ಲಿ ನಿಯಂತ್ರಣ ಕಳೆದುಕೊಂಡ ಗೂಳಿಯೊಂದು ಆಯಾತಪ್ಪಿ ಗುಂಡಿಗೆ ಬಿದ್ದಿದೆ. ಗೂಳಿಯ ಆಕ್ರೋಶ ತಣಿಸಲು ಅರವಳಿಕೆಯನ್ನು ಪಶುವೈದ್ಯ ಡಾ. ಪ್ರಶಾಂತ್ ಶೆಟ್ಟಿ ಅವರು ನೀಡಿದರು. ಆ ಬಳಿಕ ಅಗ್ನಿಶಾಮಕ ದಳ ಸಿಬ್ಬಂದಿಗಳು ಕ್ರೇನ್ ಬಳಿಸಿಕೊಂಡು ಗೂಳಿಯನ್ನು ರಕ್ಷಿಸಿದರು.

Exit mobile version