Site icon ಉಡುಪಿ ನ್ಯೂಸ್ ಪ್ಲಸ್

ಬೊಮ್ಮರಬೆಟ್ಟು ಗ್ರಾ. ಪಂ ವಿವಿಧ ಕಾಮಗಾರಿಗಳಿಗೆ 1.70 ಕೋಟಿ ರೂ ಅನುದಾನ

ಇಂದು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಬೊಮ್ಮರಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ 70 ಲಕ್ಷ ರೂಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಬೊಮ್ಮರಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 10 ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಲಾಗಿದ್ದು. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು. ಈಗಾಗಲೇ 22 ಕೋಟಿ 94 ಲಕ್ಷ ಅನುದಾನದಲ್ಲಿ ಬೊಮ್ಮರಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ರಸ್ತೆಗಳಿಗೆ ಹೊಸ ಕಾಯಕಲ್ಪ ನೀಡಲಾಗಿದ್ದು, ದೇವಸ್ಥಾನ – ದೈವಸ್ಥಾನಗಳಿಗೆ ಹೆಚ್ಚಿನ ಮೊತ್ತದ ಅನುದಾನ ಮಿಸಲಿರಿಸಿದೆ, ಈ ಭಾಗದ ಜನರ ಬಹು ಬೇಡಿಕೆಯ ಕೊಟ್ನಾಕಟ್ಟೆ ಗುಡ್ಡೆಯಂಗಡಿ ರಸ್ತೆಗೆ 3 ಕೋಟಿ ಟೆಂಡರ್ ಆಗಿದ್ದು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲಾಗುವುದು ಹಾಗೂ ಪಂಚನಬೆಟ್ಟು ರಸ್ತೆಗೆ 1 ಕೋಟಿ ಅನುದಾನ ಮಂಜೂರುಗೊಂಡಿದ್ದು ಟೆಂಡರ್ ಹಂತದಲ್ಲಿದೆ ಹಾಗೂ ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು ಎಂದರು

ಈ ಸಂದರ್ಭದಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷರು ಕುಯಿಲಾಡಿ ಸುರೇಶ್ ನಾಯಕ್, ಗ್ರಾಮ ಪಂಚಾಯತ್ ಸದಸ್ಯರಾದ ಸುನಿಲ್ ಶೆಟ್ಟಿ, ನಾರಾಯಣ್, ಗೀತಾ ದಯಾನಂದ, ದಿನೇಶ್ ಮೆಂಡನ್, ಜಯಂತಿ ಶೆಟ್ಟಿ, ಶಬರಿ, ಹರೀಶ್ ಸಾಲ್ಯಾನ್, ಸಂಗೀತ, ರಾಘವೇಂದ್ರ ನಾಯಕ್, ಉಮೇಶ್ ಶೆಟ್ಟಿ, ಅರುಣಾ ಹಾಗೂ ಸ್ಥಳೀಯ ಮುಖಂಡರು ಪಕ್ಷದ ಅನನ್ಯ ಜವಾಬ್ದಾರಿ ನಿರ್ವಹಿಸುತ್ತಿರುವ , ದಯಾನಂದ ಪೂಜಾರಿ, ಅಶೋಕ್ ಜೋಗಿ, ವಿಜಯ್, ನಿತ್ಯಾನಂದ ಪೂಜಾರಿ, ರತ್ನಾಕರ್ ಶೆಟ್ಟಿ, ಸಂದ್ಯಾ ಕಾಮತ್, ಸುನೀತಾ ನಾಯ್ಕ್, ಗಿರೀಶ್ ಕುಜಂಬೈಲು, ದಯಾನಂದ ಪೂಜಾರಿ, ಶೈಲೇಶ್, ಅಶೋಕ್, ಸಂದೀಪ್ ಕೊಂಡಾಡಿ, ಸಂದೇಶ್ ಶೆಟ್ಟಿ, ಶಿಶಿರ ಹಿರಿಯಡ್ಕ ಇಲಾಖೆ ಅಧಿಕಾರಿಗಳು, ಗುತ್ತಿಗೆದಾರರಾದ ಸತೀಶ್ ಶೆಟ್ಟಿ ಬೈರಂಪಳ್ಳಿ, ಪ್ರಕಾಶ್ ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು

ಶಿಲಾನ್ಯಾಸಗೊಂಡ ಕಾಮಗಾರಿಗಳು

1. ಶೀಂಬ್ರ ರಸ್ತೆ ಅಭಿವೃದ್ಧಿ 20 ಲಕ್ಷ
2. ಮಾಣೈ ಸ್ಮಶಾನ ರಸ್ತೆ ಅಭಿವೃದ್ಧಿ 20 ಲಕ್ಷ
3. ಮನೈ ಬೋರ್ಗಲ್ ಗುಡ್ಡೆ ರಸ್ತೆ ಅಭಿವೃದ್ಧಿ 20 ಲಕ್ಷ
4. ಪಂಚನಬೆಟ್ಟು ಮಾಡಗುಡ್ಡೆ ರಸ್ತೆ ಅಭಿವೃದ್ಧಿ 20 ಲಕ್ಷ
5. ಗಂಪ ರಸ್ತೆ ಅಭಿವೃದ್ಧಿ
20 ಲಕ್ಷ
6. ಕೊಂಡಾಡಿ ಶಾಲೆಯ ಬಳಿ ರಸ್ತೆ ಅಭಿವೃದ್ಧಿ 20 ಲಕ್ಷ
7. ಪಾಪುಜೆ ಮಠಕ್ಕೆ ಹೋಗುವ ರಸ್ತೆ ಅಭಿವೃದ್ಧಿ 10 ಲಕ್ಷ
8. ಬಸ್ತಿ ಕಾಲೋನಿ ರಸ್ತೆ ಅಭಿವೃದ್ಧಿ 10 ಲಕ್ಷ
9. ಮೈಕಾಲ ಭಂಡಾರಿ ಬೆಟ್ಟು ರಸ್ತೆಯಿಂದ ಸೀತಾರಾಮ ಪ್ರಭು ಮನೆ ಬಳಿಯ ರಸ್ತೆ ಅಭಿವೃದ್ಧಿ 10ಲಕ್ಷ
10. ಮಾದ್ರಿಗುಡ್ಡೆ ರಸ್ತೆ ಅಭಿವೃದ್ಧಿ 20 ಲಕ್ಷ

Exit mobile version