ಉಡುಪಿ ನ್ಯೂಸ್ ಪ್ಲಸ್

ಹೆಜಮಾಡಿ ಶಾಲೆಯ ಬೀಗ ಮುರಿದು ನಗದು ಕಳ್ಳತನ

ಹೆಜಮಾಡಿ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಶಿಕ್ಷಕರ ಕೊಠಡಿಯ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಮುರಿದು ಬಾಗಿಲನ್ನು ತೆರೆದು ಒಳ ಪ್ರವೇಶಿಸಿ, ಒಳಗಿದ್ದ ಕಪಾಟುಗಳ ಬೀಗವನ್ನು ಮುರಿದಿದ್ದು,  ಕಪಾಟಿನ ಬಾಗಿಲುಗಳನ್ನು  ತೆರೆದು ಜಾಲಾಡಿಸಿ ಕಪಾಟಿನ ಒಳಗೆ ಅಕ್ಷರ ದಾಸೋಹ ಆಹಾರ ವಸ್ತುಗಳ ಖರೀದಿಗೆಂದು ಇರಿಸಿದ್ದ ನಗದು ರೂಪಾಯಿ 15,000/- ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ. ಮತ್ತು ಹೈಸ್ಕೂಲ್ ಕಟ್ಟಡದಲ್ಲಿರುವ ಕಾಲೇಜು ವಿಭಾಗದ ಹಳೆಯ ಕಂಪ್ಯೂಟರ್, ಇನ್ವರ್ಟರ್, ಬ್ಯಾಟರಿಗಳಿರುವ ಕೊಠಡಿಯ ಬಾಗಿಲಿನ ಬೀಗವನ್ನು ಮುರಿದು ಕಳ್ಳತನಕ್ಕೆ ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Exit mobile version