ಉಡುಪಿ ನ್ಯೂಸ್ ಪ್ಲಸ್

ಮಣಿಪಾಲ : ತೃತೀಯ ವರ್ಷದ ಬಿಎಚ್‌ಎಮ್ ವಿದ್ಯಾರ್ಥಿನಿ ನೇಣಿಗೆ ಶರಣು

ವಿದ್ಯಾರ್ಥಿನಿಯೋರ್ವರು ತಾವು ವಾಸವಿದ್ದ ಫ್ಲಾಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಣಿಪಾಲದ ಈಶ್ವರ ನಗರದಲ್ಲಿ ನಡೆದಿದೆ. ಕೊಲ್ಕತ್ತ ಮೂಲದ ತನುಶ್ರೀ ರೇ(20) ಆತ್ಮಹತ್ಯೆ ಮಾಡಿಕೊಂಡವರು `ಎಂದು ಗುರುತಿಸಲಾಗಿದೆ.ಇವರು ಮಣಿಪಾಲದ WGSHA ದಲ್ಲಿ ತೃತೀಯ ವರ್ಷದ ಬಿಎಚ್‌ಎಮ್ (ಬ್ಯಾಚುಲರ್ ಆಫ್ ಹೋಟೆಲ್ ಮ್ಯಾನೆಜ್‌ಮೆಂಟ್) ವಿದ್ಯಾಭ್ಯಾಸ ಮಾಡುತ್ತಿದ್ದರು.ಅವರು ಜೀವನದಲ್ಲಿ ಜಿಗುಪ್ಪೆಗೊಂಡು ತಾವು ವಾಸವಿದ್ದ ಫ್ಲಾಟ್ ನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಮೃತರ ತಂದೆ ಡಾ.ಚಂದನ್ ರೇ ಅವರು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Exit mobile version