ಉಡುಪಿ ನ್ಯೂಸ್ ಪ್ಲಸ್

ಕಾಪು: ನವೆಂಬರ್ 7ರ ಜನಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆ

ಕಾಪು ಪೇಟೆಯಲ್ಲಿ ನವೆಂಬರ್ 7 ರಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರವರ ನೇತೃತ್ವದಲ್ಲಿ ನಡೆಯಲಿರುವ ಜನಸಂಕಲ್ಪ ಸಮಾವೇಶದ ಪೂರ್ವಭಾವಿ ಸಭೆಯು ಕಾಪು ತಾಲೂಕಿನ ಕುತ್ಯಾರು, ಶಿರ್ವ, ಮಜೂರು ಶಕ್ತಿಕೇಂದ್ರಗಳಲ್ಲಿ ಆಯೋಜಿಸಲಾಗಿದ್ದು ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಭಾಗವಹಿಸಿದರು. ಈ ಸಂದರ್ಭದಲ್ಲಿ ಮೈಸೂರು ಎಲೆಕ್ನಿಕಲ್ ಲಿಮಿಟೆಡ್ ಇದರ ಅಧ್ಯಕ್ಷ ಉದಯಕುಮಾರ್ ಶೆಟ್ಟಿ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಶಿಲ್ಪಾ ಸುವರ್ಣ, ಕುತ್ಯಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಲತಾ ಆಚಾರ್ಯ, ಶಕ್ತಿಕೇಂದ್ರದ ಉಸ್ತುವಾರಿಗಳಾದ ವಿಜಯ ಕುಮಾರ್, ಗುರುಪ್ರಸಾದ್‌ ಶೆಟ್ಟಿ,ಗುರುಕೃಪಾ ನವೀನ್ಶೆಟ್ಟಿ ಕುತ್ಯಾರು, ಗಣೇಶ್ ಶೆಟ್ಟಿ ಪಯ್ಯಾರು, ಮಜೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಮಧುಸೂದನ್,ಸಂದೀಪ್ ಮಜೂರು, ಮುರಳೀಧರ ಪೈ, ರಾಜು ಶೆಟ್ಟಿ, ಪ್ರಸಾದ್ ಕುತ್ಯಾರ್, ಗಿರಿಧರ್ ಪ್ರಭು, ರಾಜೇಶ್ ಶೆಟ್ಟಿ, ಹಾಗೂ ಗ್ರಾಮ ಪಂಚಾಯತ್ ಸದಸ್ಯರು, ವಿವಿಧ ಸ್ತರದ ಅನನ್ಯಜವಾಬ್ದಾರಿ ನಿರ್ವಹಿಸುತ್ತಿರುವ ಪಕ್ಷದ ಪ್ರಮುಖರು, ಸಳೀಯ ಕಾರ್ಯಕರ್ತರು ಉಪಸ್ಥಿತರಿದರು 

Exit mobile version