ಉಡುಪಿ ನ್ಯೂಸ್ ಪ್ಲಸ್

ಎಸ್ಡಿಪಿಐ ಕಾಪು ಕ್ಷೇತ್ರದ ನೂತನ ಕಾಛೇರಿ ಉದ್ಘಾಟನೆ; ಚುನಾವಣಾ ಪೂರ್ವ ಸಿದ್ದತಾ ಸಭೆ

ಕಾಪು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಕಾಪು ಕ್ಷೇತ್ರದ ನೂತನ ಕಾಛೇರಿ ಉದ್ಘಾಟನೆ ಹಾಗು ಚುನಾವಣಾ ಪೂರ್ವ ಸಿದ್ದತಾ ಸಭೆ ಕಾಪುವಿನ ಹಿರಾ ಕಾಂಪ್ಲೆಕ್ಸ್ ನಲ್ಲಿ ನಡೆಯಿತು. ಎಸ್ಡಿಪಿಐ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಇಲ್ಯಾಸ್ ಮೊಹಮ್ಮದ್ ತುಂಬೆ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಸಿವು ಮತ್ತು ಭಯ ಮುಕ್ತ ಸ್ವಾತಂತ್ರವೇ ಎಸ್ಡಿಪಿಐ ಪಕ್ಷದ ಉದ್ದೇಶ.ಜಾತ್ಯಾತೀತ ಮತ್ತು ಪ್ರಜಾಪ್ರಭುತ್ವ ನೆಲೆಯನ್ನು ಗಟ್ಟಿಗೊಳಿಸಲು ಎಸ್ಡಿಪಿಐ ಪಕ್ಷದೊಂದಿಗೆ ದೃಢವಾಗಿ ನಿಲ್ಲಬೇಕೆಂದು ಕರೆ ನೀಡಿದ ಅವರು ಪ್ರಸಕ್ತ ದೇಶದ ಪರಿಸ್ಥಿತಿ ಮತ್ತು ಎಸ್ಡಿಪಿಐ ಪಕ್ಷದ ಅಗತ್ಯತೆಯ ಬಗ್ಗೆ ಸವಿಸ್ತಾರವಾಗ ವಿವರಿಸಿದರು. 

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ಡಿಪಿಐ ಕಾಪು ಕ್ಷೇತ್ರ ಸಮಿತಿ ಅಧ್ಯಕ್ಷರಾದ ಹನೀಫ್ ಮೂಳೂರು ವಹಿಸಿದ್ದರು.ಉಡುಪಿ ಜಿಲ್ಲಾಧ್ಯಕ್ಷ ಶಾಹಿದ್ ಅಲಿ ಸಂದರ್ಭೋಚಿತವಾಗಿ ಮಾತನಾಡಿದರು. ಎಸ್ಡಿಪಿಐ ಮುಖಂಡರಾದ ಅಥಾವುಲ್ಲಾ ಜೋಕಟ್ಟೆ,ಅಬೂಬಕ್ಕರ್ ಪಾದೂರು,ಅಶ್ರಫ್ ಅಹಮದ್,ಸರಿತಾ ಶಿವಾನಂದ ,ಮಜೀದ್ ಪೊಲ್ಯ,ನೂರುದ್ದೀನ್ ಕಾಪು, ಆಸಿಫ್ ವೈಸಿ ಉಚ್ಚಿಲ ಹಾಗು ಅಝೀಝ್ ಪಡುಬಿದ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು

Exit mobile version