ಉಡುಪಿ ನ್ಯೂಸ್ ಪ್ಲಸ್

ಉಚ್ಚಿಲ ಪೇಟೆಯಲ್ಲಿ ಕಳ್ಳರ ಲಗ್ಗೆ: ಹಲವಾರು ಅಂಗಡಿಗಳ ಬೀಗ ಮುರಿತ ನಗದು ಕಳವು.

ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ೬೬ರ ಬಳಿಯ ಅಂಗಡಿಗಳಿಗೆ ನುಗ್ಗಿದ ಕಳ್ಳನೊಬ್ಬ ಶಟರ್ ಬೀಗ ಮುರಿದು, ಹಣವನ್ನು ಕದ್ದೊಯ್ದ ಘಟನೆ ಮಂಗಳವಾರ ಬೆಳಿಗ್ಗಿನ ಜಾವ ಘಟಿಸಿದ್ದು, ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸರಿಯಾಗಿದೆ. ಉಚ್ಚಿಲದ ಮಹಮ್ಮದ್ ರಫೀಕ್ ರವರ ಸೈಬರ್ ಕೆಫೆ, ಹೋಟೆಲ್ ಸ್ಪೈಸ್, ತವಕ್ಕಲ್ ಬೇಕರಿ ಶಶಿ ಲಂಚ್ ಹೋಮ್ ನ ಬೀಗ ಮುರಿದು ಹಣ ದೋಚಿದ್ದಾನೆ. ಬೆಳಿಗ್ಗೆ ೫:೦೦ ಗಂಟೆಯ ಸುಮಾರಿಗೆ ಸ್ಕೂಟರಿನಲ್ಲಿ ಬಂದ ಕಳ್ಳ ಶಟರ್ ಮುರಿದು ಒಳಗೆ ಹೊಕ್ಕಿದ್ದಾನೆ, ಕೇವಲ ಹಣ ಮಾತ್ರ ಕಳ್ಳತನ ಮಾಡಿದ್ದಾನೆ. ಸೈಬರ್ ನಲ್ಲಿ ಲಕ್ಷಾಂತರ ಮೌಲ್ಯದ ಲ್ಯಾಪ್ಟಾಪ್ ಇದ್ದು, ಅದನ್ನು ಮುಟ್ಟಿಲ್ಲ. ಡ್ರಾವರ್ ಬೇಗ ಮುರಿದು ಕಳ್ಳತನ ನಡೆಸಿದ್ದಾನೆ. ಹೆಲ್ಮೆಟ್ ಮತ್ತು ಜಾಕೆಟ್ ಧರಿಸಿದ ಯುವಕ ಬರುವ ಮತ್ತು ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪಡುಬಿದ್ರೆ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಕಳ್ಳನ ಜಾಡು ಹಿಡಿಯುವಲ್ಲಿ ಯಶ ಸಾಧಿಸಿದ್ದು, ಕಳ್ಳನಿಗಾಗಿ ಬಲೆ ಬೀಸಿದ್ದಾರೆ. 

 

Exit mobile version