Site icon ಉಡುಪಿ ನ್ಯೂಸ್ ಪ್ಲಸ್

ಪಡುಬಿದ್ರಿ ರೋಟರಿ ಕ್ಲಬ್ ಹಾಗು ರೋಟರಿ ಸಮುದಾಯದಳ ವತಿಯಿಂದ 6 ನೇ ಬಾರಿ ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ

YouTube Poster

ನಶಿಸಿ ಹೋಗುತ್ತಿರುವ ಭಜನ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪಡುಬಿದ್ರಿ ರೋಟರಿ ಕ್ಲಬ್ ಹಾಗು ರೋಟರಿ ಸಮುದಾಯದಳ ವತಿಯಿಂದ 6 ನೇ ಬಾರಿ ದ.ಕ ಮತ್ತು ಉಡುಪಿ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಯನ್ನು ಆಯೋಜಿಸಲಾಗಿದೆ…ಎಂದು ಪಡುಬಿದ್ರಿ ಸ್ಥಾಪಕ ಅಧ್ಯಕ್ಷ ವೈ.ಅಉಧೀರ್ ಕುಮಾರ್ ಮಾಹಿತಿ ನೀಡಿದರು. ಅವರು ಕಾಪು ಪ್ರೆಸ್‌ ಕ್ಲಬ್ ನಲ್ಲಿ ಶುಕ್ರವಾರ ಮಾತನಾಡಿ ಭಜನಾ ಸ್ಪರ್ಧೆಯು ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ದಿನಾಂಕ :30-10-2022 ರ ಅದಿತ್ಯವಾರ ಬೆಳಿಗ್ಗೆ 9:00 ಗಂಟೆ ಯಿಂದ ಸಂಜೆ 6:30 ಗಂಟೆಯ ವರೆಗೆ ನಡೆಯಲಿದೆ.. ಅವಿಭಜಿತ ಜಿಲ್ಲೆಯ ಬಲಿಷ್ಠ 12 ಭಜನಾ ತಂಡಗಳು ಸ್ಪರ್ಧೆಯಲ್ಲಿ ಭಾಗವಹಿಸಲಿದೆ. ಸ್ಪರ್ಧೆಯ ಪ್ರಥಮ ಸ್ಥಾನ ವಿಜೇತರಿಗೆ ರೂ. 10000/- ದ್ವಿತೀಯ ಸ್ಥಾನ ವಿಜೇತರಿಗೆ ರೂ . 7000/- ಹಾಗು ತೃತೀಯ ಸ್ಥಾನ ವಿಜೇತರಿಗೆ ರೂ.5000/- ನಗದು ಹಾಗು ಶಾಶ್ವತ ಫಲಕ ಹಾಗು ಪ್ರಶಸ್ತಿ ಪತ್ರ ನೀಡಲಾಗುತ್ತದೆ.. ಅದಲ್ಲದೆ ಉತ್ತಮ ಗಾಯಕ ,ಉತ್ತಮ ಗಾಯಕಿ ಉತ್ತಮ ತಬಲ ವಾದಕ ಹಾಗು ಉತ್ತಮ ಹಾರ್ಮೋನಿಯಂ ವಾದಕ ಪ್ರಶಸ್ತಿ ನೀಡಲಾಗುತ್ತದೆ.. ಈ ಕಾರ್ಯಕ್ರಮದಲ್ಲಿ ಕಳೆದ 10 ವರ್ಷಗಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂದರ್ಭದಲ್ಲಿ ವಿಭಿನ್ನ ರೀತಿಯ ವೇಷ ಧರಿಸಿ ಕಾಯಿಲೆಗೆ ತುತ್ತಾದ ಮಕ್ಕಳಿಗೆ ನೆರವು ನೀಡಿ ಅವರ ಬಾಳಿಗೆ ಬೆಳಕಾದ ಸಮಾಜ ಸೇವಕ ರವಿ ಕಟಪಾಡಿ ಹಾಗು ಕಲರ್ಸ ಕನ್ನಡ ಚಾನಲ್ ನಲ್ಲಿ ನಡೆದ ಎದೆ ತುಂಬಿ ಹಾಡುವೆನು ಸ್ಪರ್ಧೆಯ ದ್ವಿತೀಯ ಪ್ರಶಸ್ತಿ ವಿಜೇತ ಹಾಗು ಅಂತಾರಾಷ್ಟ್ರೀಯ ಮಟ್ಟದ ಭಜನಾ ಸ್ಪರ್ಧೆಯಲ್ಲಿ ಸರಣಿ ಶ್ರೇಷ್ಠ ಉತ್ತಮ ಗಾಯಕ ಪ್ರಶಸ್ತಿ ಪಡೆದ ಸಂದೇಶ್ ನೀರುಮಾರ್ಗ ಹಾಗು ವೈದ್ಯಕೀಯ ಕ್ಷೇತ್ರದಲ್ಲಿ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ನೀಡಿ ಸಮಾಜ ಮುಖಿ ಸೇವೆ ಮಾಡಿದ ಡಾ! ಸುರೇಶ್ ಕೋಟ್ಯಾನ್ ಚಿತ್ರಾಪು ರವರನ್ನು ಸಾನ್ನಿಸಿ ಗೌರವಿಸಲಾಗುವುದು ಎಂದರು. ಪತ್ರಿಕಾ ಗೋಷ್ಠಿಯಲ್ಲಿ ವೈ ಸುಧೀರ್ ಕುಮಾರ್ ಸ್ಥಾಪಕ ಅಧ್ಯಕ್ಷರು ರೋಟರಿ ಕ್ಲಬ್ ಪಡುಬಿದ್ರಿ ಗೀತಾ ಅರುಣ್ ಅಧ್ಯಕ್ಷರು, ರೋಟರಿ ಕ್ಲಬ್ ಪಡುಬಿದ್ರಿ , ಸುನಿಲ್ ಕುಮಾರ್ ಸದಸ್ಯರು, ರೋಟರಿ ಕ್ಲಬ್ ಪಡುಬಿದ್ರಿ , ದೀಪಾಶ್ರೀ ಕರ್ಕೇರ , ತನಿಷಾ ಜಿ ಕುಕ್ಯಾನ್ ಅಧ್ಯಕ್ಷರು ರೋಟರಿ ಸಮುದಾಯದಳ ಪಡುಬಿದ್ರಿ ಕಾರ್ಯದರ್ಶಿ, ರೋಟರಿ ಸಮುದಾಯದಳ ಪಡುಬಿದ್ರಿ ,ಸುಧಾಕರ್ ಕೆ ಸದಸ್ಯರು, ರೋಟರಿ ಕ್ಲಬ್ ಪಡುಬಿದ್ರಿ ,ಜ್ಯೋತಿ ಮೆನನ್ ಕಾರ್ಯದರ್ಶಿ, ರೋಟರಿ ಕ್ಲಬ್ ಪಡುಬಿದ್ರಿ ಉಪಸ್ಥಿತರಿದ್ದರು.

Exit mobile version