Site icon ಉಡುಪಿ ನ್ಯೂಸ್ ಪ್ಲಸ್

ಕಾಪು ಮಲ್ಲಾರು ಪಕೀರ್ಣಕಟ್ಟೆಯಲ್ಲಿ ಮೊಹಮ್ಮದ್ ಸಾದಿಕ್ ದಿನಾರ್ ನೇತೃತ್ವದ ಗೋ‌ ಶಾಲೆ ; ಗೋ‌ ಪೂಜೆ ಮಾಡಿ‌ ಗೋವುಗಳಿಗೆ ಗಟ್ಟಿ, ಬಾಳೆಹಣ್ಣು ತಿನ್ನಿಸಿದ ಕಾಂಗ್ರೆಸ್ ಮಹಿಳಾ ವಿಭಾಗ

YouTube Poster

ಕಾಪು ತಾಲೂಕಿನ ಮಲ್ಲಾರು ಗ್ರಾಮದ ಪಕೀರ್ಣಕಟ್ಟೆಯಲ್ಲಿ ಎಂಬಲ್ಲಿ ಮೊಹಮ್ಮದ್ ಸಾದಿಕ್ ದಿನಾರ್ ಎಂಬ ವ್ಯಕ್ತಿ ಆವರೆ ಸ್ವಂತಃ ಜಾಗ ಖರೀದಿಸಿ ತನ್ನ ಊರಿನಲ್ಲಿಯೂ ಕೂಡ ಗೋಶಾಲೆ ಆಗಬೇಕೆಂಬ ನಿರ್ಧಾರ ಕೈಗೊಂಡು ಗೋ ಶಾಲೆಯನ್ನು ಆರಂಭಿಸಿದ್ದಾರೆ. ಅದಕ್ಕಾಗಿ ಸುಸಜ್ಜಿತ ಹಟ್ಟಿ, ಬೇಕಾದ ಹುಲ್ಲು, ಜೊತೆಗೆ ಚಾಕರಿಯವರು ಇದ್ದಾರೆ. ಇಂದು ಕಾಂಗ್ರೆಸ್ ಮಹಿಳಾ ವಿಭಾಗ ಇಲ್ಲಿ ಗೋ ಪೂಜೆ ಮಾಡಿ ಗೋವುಗಳಿಗೆ ಗಟ್ಟಿ, ಬಾಳೆಹಣ್ಣು ತಿನ್ನಿಸಿ ಸಂತಸ ಪಟ್ಟರು. ಈ ಸಂದರ್ಭ ಮಾತನಾಡಿದ ಗೋ ಶಾಲೆಯ ರುವಾರಿ ಮೊಹಮ್ಮದ್ ಸಾದಿಕ್ ದಿನಾರ್ ಮಲ್ಲಾರು ಗ್ರಾಮದಲ್ಲಿ ಗೋಶಾಲೆ ಆಗಬೇಕೆಂಬ ಹಂಬಲದಿಂದ ಇದನ್ನು ನಿರ್ಮಿಸಲಾಗಿದೆ. ಸುಮಾರು 4-5 ವರ್ಷದ ಹಿಂದೆ ಮೂರುವರೆ ಎಕ್ರೆ ಜಾಗ ಖರೀದಿಸಿ ಈ ಗೋಶಾಲೆ ನಿರ್ಮಿಸಲಾಗಿದೆ. ಪ್ರಸ್ತುತ 15 ಗೋವುಗಳಿವೆ. ಇದರಲ್ಲಿ ಜೆರ್ಸಿ, ಗಿರ್, ಮಲೆನಾಡು ಗಿಡ್ಡ ತಳಿಯ ಹಸುಗಳಿವೆ. ಹುಲ್ಲನ್ನು ಇಲ್ಲಿಯೇ ಬೆಳೆಸಲಾಗುತ್ತದೆ. ಹಾಲನ್ನು ಡೈರಿಗೆ ನೀಡುತ್ತಿದ್ದೇವೆ. ಇಬ್ಬರು ಚಾಕರಿಯವರು ದನದ ಆರೈಕೆಗೆ ಇದ್ದಾರೆ. ಯಾವುದೇ ಲಾಭವಿಲ್ಲ ಗೋವನ್ನು ಒಳ್ಳೆಯ ರೀತಿಯ ನೋಡಬೇಕೆಂಬ ಹಂಬಲ ನಮ್ಮದು. ತಮ್ಮಲ್ಲಿಗೆ ಗೋವುಗಳನ್ನು ತಂದದಲ್ಲಿ ಸ್ವೀಕರಿಸುತ್ತೇವೆ. ಇಂದು ಕಾಂಗ್ರೆಸ್ ಮಹಿಳಾ ವಿಭಾಗದಿಂದ ನಮ್ಮಲ್ಲಿಯ ದನಗಳಿಗೆ ಗೋ ಪೂಜೆ ನಡೆದಿದೆ. ಸಂತಸವಾಗಿದೆ. ಮುಂದೆ ಇನ್ನಷ್ಟು ದನಗಳನ್ನು ಖರೀದಿಸುವ ಯೋಜನೆಯಿದೆ ಎಂದರು.ಈ ಸಂದರ್ಭ ನವೀನ್ ಚಂದ್ರ ಸುವರ್ಣ ಶೇಖಬ್ಬ ಉಚ್ಚಿಲ ಗೀತಾ ವಾಗ್ಲೇ ಶಕುಂತಲಾ ಶೆಟ್ಟಿ ಅಶ್ವಿನಿ  ಮಹಿಳಾ ವಿಭಾಗದ ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

Exit mobile version