ಉಡುಪಿ ನ್ಯೂಸ್ ಪ್ಲಸ್

ಎಐಸಿಸಿ ಅಧ್ಯಕ್ಷರಾಗಿ ಮಲ್ಲಿಕಾರ್ಜುನ ಖರ್ಗೆ: ಹರೀಶ್ ಕಿಣಿ ಹರ್ಷ

ಉಡುಪಿ: ಅಖಿಲ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ನಾಡಿನ ಹಿರಿಯ ಮುತ್ಸದ್ದಿ, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ ನಾಯಕರಾಗಿ ಸೇವೆ ಸಲ್ಲಿಸುತ್ತಿರುವ ಮಲ್ಲಿಕಾರ್ಜುನ ಖರ್ಗೆ ಆಯ್ಕೆಯಾಗಿರುವುದಕ್ಕೆ ಕೆಪಿಸಿಸಿ‌ ಕೋ-ಆರ್ಡಿನೇಟರ್ ಅಲೆವೂರು ಹರೀಶ್ ಕಿಣಿ ಹರ್ಷ ವ್ಯಕ್ತಪಡಿಸಿದ್ದಾರೆ.ಖರ್ಗೆಯವರ ವಿಜಯ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಕಾರ್ಯರ್ತರಿಗೆ ಸಿಕ್ಕ ಫಲ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ, ಸರಕಾರದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿ ದಕ್ಷ ಹಾಗೂ ಸಮರ್ಥ ರೀತಿಯಲ್ಲಿ ಸೇವೆ ಸಲ್ಲಿಸಿದ್ದ ಖರ್ಗೆ ಅವರು ಸಮಾಜದ ಕಟ್ಟೆ ಕಡೆಯ ವ್ಯಕ್ತಿಗೂ ಅನುಕೂಲವಾಗುವಂತಹ ಕಾನೂನು, ನಿಯಮಾವಳಿಗಳು ರೂಪುಗೊಳ್ಳುವಲ್ಲಿ ಕಾರಣರಾದವರು. ಎರಡು ದಶಕಗಳ ಹಿಂದೆ ಆದಿಉಡುಪಿಯ ಸಾರ್ವಜನಿಕ ಸಭೆಯಲ್ಲಿ, ಮೊಗವೀರ ಯುವ ಸಂಘಟನೆಯ ಸಮಾವೇಶದಲ್ಲಿ ಪಾಲ್ಗೊಂಡ ಕ್ಷಣಗಳನ್ನು ಹರೀಶ್ ಕಿಣಿ ಸ್ಮರಿಸಿದ್ದಾರೆ.

Exit mobile version