Site icon ಉಡುಪಿ ನ್ಯೂಸ್ ಪ್ಲಸ್

ಮಜೂರು ಗ್ರಾ. ಪಂ ವಿವಿಧ ಕಾಮಗಾರಿಗಳಿಗೆ 1 ಕೋಟಿ 48 ಲಕ್ಷ ರೂ ಅನುದಾನ

ಇಂದು ಮಾನ್ಯ ಶಾಸಕರಾದ ಲಾಲಾಜಿ ಆರ್ ಮೆಂಡನ್ ರವರು ಮಜೂರು ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 1 ಕೋಟಿ 48 ಲಕ್ಷ ರೂಗಳ ವಿವಿಧ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮಾನ್ಯ ಶಾಸಕರು ಮಜೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಸುಮಾರು 14 ಕಾಮಗಾರಿಗಳಿಗೆ ಗುದ್ದಲಿ ಪೂಜೆ ಹಾಗೂ 4 ಕಾಮಗಾರಿಗಳಿಗೆ ಉದ್ಘಾಟನೆ ನೆರವೇರಿಸಲಾಗಿದ್ದು. ಬಿಜೆಪಿ ನೇತೃತ್ವದ ಮಜೂರು ಗ್ರಾಮ ಪಂಚಾಯತ್ ಉತ್ತಮವಾಗಿ ಜನರ ಆಶೋತ್ತರಗಳಿಗೆ ಸ್ಪಂದಿಸುತಿದ್ದು ಜನಪ್ರತಿನಿದಿಗಳು ಜನರೊಂದಿಗೆ ನಿಕಟಸಂಪರ್ಕ ಹೊಂದಿದ್ದು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗಾಗಲೇ ಪಂಚಾಯತ್ ವ್ಯಾಪ್ತಿಯಲ್ಲಿ ಹೆಚ್ಚಿನ ಮಟ್ಟದಲ್ಲಿ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದ್ದು ಈಗಾಗಲೇ 10.10 ಕೋಟಿ ಅನುದಾನ ಒದಗಿಸಲಾಗಿದೆ. ಇನ್ನು ಹೆಚ್ಚಿನ ರೀತಿಯಲ್ಲಿ ಮುಂದಿನ ದಿನಗಳಲ್ಲಿ ಅನುದಾನ ನೀಡಲಾಗುವುದು ಎಂದರು 
ಉದ್ಘಾಟನೆ/ಶಿಲಾನ್ಯಾಸಗೊಂಡ ರಸ್ತೆಗಳು 

1. ಪಾದೂರು ಲಚ್ಚಿಲ್‌ನಿಂದ ಪಾದೂರು ಬನ್ಸಾಲೆಗೆ ಹೋಗುವ ರಸ್ತೆ ಅಭಿವೃದ್ಧಿ.
2. ಪಾದೂರು ಚಂದ್ರನಗರ ಮುಖ್ಯ ರಸ್ತೆಯಿಂದ ನರಹರಿ ತಂತ್ರಿ ಮನೆ ವರೆಗಿನ ರಸ್ತೆ ಅಭಿವೃದ್ಧಿ
3. ಪಾದೂರು ಪಾಲಮೆ ನಿತ್ಯಾನಂದ ನಾಯಕ್ ಮನೆಗೆ ಹೋಗುವ ರಸ್ತೆ ಅಭಿವೃದ್ಧಿ
4. ಚಂದ್ರನಗರ ರಮೇಶ ಆಚಾರ್ಯ ಮನೆ ಬಳಿಯ ರಸ್ತೆ ಅಭಿವೃದ್ಧಿ
5. ಪಾದೂರು ಕುರಾಲು ರಸ್ತೆ ಅಭಿವೃದ್ಧಿ
6. ಕರಂದಾಡಿ ಪಂಜಿತ್ತೂರು ರಸ್ತೆ ಅಭಿವೃದ್ಧಿ 7. ರುದ್ರಯ್ಯ ಆಚಾರ್ಯ ಮನೆ ಬಳಿಯ ರಸ್ತೆ ಅಭಿವೃದ್ಧಿ
8. ಪಾದೂರು ಒಳದೂರು ವಸಂತ ಪೂಜಾರಿ ಮನೆ ಬಳಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ
9. ಗುರುರಾಜ್ ಐತಾಳ್ ಮನೆ ಬಳಿ ರಸ್ತೆಗೆ ಮೋರಿ ರಚನೆ
10. ಪಾದೂರು ಗ್ರಾಮದ ಒಳದೂರು ನಾಗಬ್ರಹ್ಮಸ್ಥಾನದಿಂದ ನೀಲು ನಿವಾಸದವರೆಗಿನ ರಸ್ತೆ ಅಭಿವೃದ್ಧಿ
11. ಕರಂದಾಡಿ ಶಾಲೆ ಬಳಿ ರಸ್ತೆಗೆ ಚರಂಡಿ ನಿರ್ಮಾಣ
12. ವಿಷ್ಣುಮೂರ್ತಿ ದೇವಸ್ಥಾನಕ್ಕೆ ಹೋಗುವ ರಸ್ತೆ ಅಭಿವೃದ್ಧಿ
13. ವಿಷ್ಣುಮೂರ್ತಿ ದೇವಸ್ಥಾನದ ಬಳಿ ಕಾಲು ಸಂಕ ನಿರ್ಮಾಣ
14. ಪಾದೂರು ಸುಬ್ರಹ್ಮಣ್ಯ ತಂತ್ರಿ ಮನೆ ಬಳಿ ಕಾಲು ಸಂಕ ನಿರ್ಮಾಣ
15. ಪಾದೂರು ಕೊಲ್ಲಬೇಟ್ಟು ರಸ್ತೆ ಅಭಿವೃದ್ಧಿ
16. ಪಿಲಿಚಂಡಿ ರಸ್ತೆ ಅಭಿವೃದ್ಧಿ
17. ಪಾಲಮೆ & ವಳದೂರು ಬಳಿ ರಸ್ತೆ ಅಭಿವೃದ್ಧಿ
18. ಹೆರೋರು ತಿಮ್ಮ ಮುಖಾರಿ ಮನೆ ಬಳಿ ರಸ್ತೆ ಅಭಿವೃದ್ಧಿ

Exit mobile version