Site icon ಉಡುಪಿ ನ್ಯೂಸ್ ಪ್ಲಸ್

ರಾಷ್ಟ್ರೀಯ ಹೆದ್ದಾರಿ ೬೬ರ ಕಾಪು – ಕೊಪ್ಪಲಂಗಡಿ ಬಳಿ ಸಂಭವಿಸಬಹುದಾಗಿದ್ದ ಅವಘಡ ಕಾರ್ಯಾಚರಣೆಯಿಂದಾಗಿ ತಪ್ಪಿದ ಭಾರೀ ಅನಾಹುತ

YouTube Poster

ರಾಷ್ಟ್ರೀಯ ಹೆದ್ದಾರಿ ೬೬ರ ಕಾಪು – ಕೊಪ್ಪಲಂಗಡಿ ಬಳಿ ಸಂಭವಿಸಬಹುದಾಗಿದ್ದ ಭಾರೀ ಅವಘಡವೊಂದು ಅಗ್ನಿಶಾಮಕದಳದ ಸಿಬಂದಿಗಳ ಸಕಾಲಿಕ ಕಾರ್ಯಾಚರಣೆಯಿಂದಾಗಿ ತಪ್ಪಿದ್ದು ಹೆದ್ದಾರಿ ಸಂಚಾರಿಗಳು ಭಾರೀ ಅಪಾಯದಿಂದ ಪಾರಾಗುವಂತಾಗಿದೆ. ಮಂಗಳೂರು ಬಂದರ್‌ನಿಂದ ಮುನವಳ್ಳಿಗೆ ಕೋಲ್ ಸಾಗಾಟ ಮಾಡುತ್ತಿದ್ದ ಟ್ರಕ್‌ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿತ್ತು ಹೆದ್ದಾರಿಯಲ್ಲಿ ಸಂಚರಿಸುವ ಇತರ ವಾಹನ ಸವಾರರು ಸೂಕ್ತ ರೀತಿಯಲ್ಲಿ ಎಚ್ಚರಿಸಿದ ಪರಿಣಾಮ ಟ್ರಕ್ ಚಾಲಕ ಕಾಪು ವಿದ್ಯಾನಿಕೇತನ ಶಾಲೆ ಬಳಿಯಲ್ಲಿ ಟ್ರಕ್‌ನ್ನು ನಿಲ್ಲಿಸಿ ತಪಾಸಣೆಗೊಳಪಡಿಸಿದ್ದನು. ಈ ವೇಳೆ ಟ್ರಕ್‌ನಲ್ಲಿ ತುಂಬಿದ್ದ ಕೋಲ್‌ನಲ್ಲಿ ಘರ್ಷಣೆಯುಂಟಾಗಿ ಬೆಂಕಿ ಕಾಣಿಸಿಕೊಂಡಿದ್ದು ಟ್ರಕ್ ಚಾಲಕ ಕೂಡಲೇ ಸ್ಥಳೀಯರ ಸಹಕಾರದೊಂದಿಗೆ ಉಡುಪಿ ಅಗ್ನಿಶಾಮಕದಳಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬಂದಿಗಳು ಟ್ರಕ್‌ನ ಮೇಲೇರಿ ಹೊಗೆಯನ್ನು ಸಂಪೂರ್ಣವಾಗಿ ನಂದಿಸುವ ಮೂಲಕ ಮುಂದೆ ಸಂಭವಿಸಬಹುದಾಗಿದ್ದ ಭಾರೀ ಅವಘಡವೊಂದನ್ನು ತಪ್ಪಿಸಿದ್ದಾರೆ.

Exit mobile version