Site icon ಉಡುಪಿ ನ್ಯೂಸ್ ಪ್ಲಸ್

18ರಂದು ನಡೆಯುವ ಟೋಲ್ ತೆರವು ಕಾರ್ಯಾಚರಣೆಯ ಹೋರಾಟದಲ್ಲಿ ಉಡುಪಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಬಾಲಕ್ರಷ್ಣಶೆಟ್ಟಿ ಕರೆ

YouTube Poster

022ರ ಮಾರ್ಚ್ 22 ರಂದು ದೇಶದ ಅತ್ಯುನ್ನತ ಪ್ರಜಾಸತ್ತಾತ್ಮಕ ಸಂಸ್ಥೆಯಾದ ಲೋಕಸಭೆಯಲ್ಲಿ ಸಾರಿಗೆ ಸಚಿವ ಶ್ರೀ ನಿತಿನ್ ಗಡ್ಕರಿಯವರು, ಕಾನೂನು ಬಾಹಿರವಾಗಿ ಎಲ್ಲಾ ಟೋಲ್ ಗೇಟ್ ಗಳನ್ನು ಮುಚ್ಚುವುದಾಗಿ ಭರವಸೆ ನೀಡಿದ್ದರು. ಅವರು ನೀಡಿದ ಅವಧಿ ಮುಗಿದು 4 ತಿಂಗಳು ಕಳೆಯುತ್ತಾ ಬಂದರೂ, ಸುರತ್ಕಲ್ ಟೋಲ್ ನಲ್ಲಿ ಕಾನೂನು ಬಾಹಿರವಾಗಿ ವಾಹನ ಸವಾರರಿಂದ ಟೋಲ್ ಹೆಸರಲ್ಲಿ ಲೂಟಿ ಮಾಡುತ್ತಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರಕಾರಗಳು ಹಾಗೂ ಶಾಸಕರು, ಸಂಸತ್ ಸದಸ್ಯರು ಹಾಗೂ ಈ ಜಿಲ್ಲೆಗಳ ಮೂವರು ಮಂತ್ರಿಗಳು ಹೇಳಿಕೆ ನೀಡುವುದಕ್ಕೆ ಮಾತ್ರ ಸೀಮಿತರಾಗಿದ್ದಾರೆ. ಸಾಕಷ್ಟು ಬಾರಿ ಉಡುಪಿ ಮತ್ತು ದ.ಕ. ಜಿಲ್ಲೆಯ ಸಾರ್ವಜನಿಕರು ಟೋಲ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ,ಧರಣಿ ನಡೆಸಿ ಸರಕಾರವನ್ನು ಎಚ್ಚರಿಸಿದರೂ ಸುಳ್ಳಿನ ಮೇಲೆ ಸುಳ್ಳಿನ ಭರವಸೆ ನೀಡುತ್ತಾ ಜನರನ್ನು ವಂಚಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಅಕ್ಟೋಬರ್ 18ರಂದು ನಡೆಯುವ ಟೋಲ್ ತೆರವು ಕಾರ್ಯಾಚರಣೆಯ ಐತಿಹಾಸಿಕ ಹೋರಾಟದಲ್ಲಿ ಉಡುಪಿ ಜಿಲ್ಲೆಯ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಈ ಮೂಲಕ ವಿನಂತಿಸಿಕೊಳ್ಳುತ್ತಿದೇವೆ.

ಬಾಲಕ್ರಷ್ಣಶೆಟ್ಟಿ
ಸಿಪಿಐ-ಎಂ, ಉಡುಪಿ ಜಿಲ್ಲಾ ಕಾರ್ಯದರ್ಶಿ

Exit mobile version